Sunday, October 5, 2025

Latest Posts

ರೈಲ್ವೆ ಇಲಾಖೆಯ ‘ಮಹಾ’ ಮಿಸ್ಟೇಕ್ – 1 ಕೋಟಿ ರೂ. ಹಣ ಕೊಟ್ಟು ಬಕ್ರಾ ಆಯ್ತಾ ರೈಲ್ವೆ ಇಲಾಖೆ?

- Advertisement -

ಒಂದು ಮರದ ಮೌಲ್ಯ ಲೆಕ್ಕಹಾಕುವಲ್ಲಿ ರೈಲ್ವೆ ಇಲಾಖೆ ಭಾರೀ ತಪ್ಪು ಮಾಡಿಕೊಂಡಿದೆ. ಮರವನ್ನ ಕೆಂಪು ಶ್ರೀಗಂಧದ ಮರವೆಂದು ಭಾವಿಸಿ ಒಂದು ಕೋಟಿ ರೂಪಾಯಿ ಮೊತ್ತವನ್ನ ಪಾವತಿಸಿದ್ದಾರೆ. ಆದ್ರೆ ನೀವು ಆ ಮರದ ಬೆಲೆಯನ್ನ ಕೇಳಿದ್ರೆ ನೀವು ಶಾಕ್ ಆಗ್ತೀರಾ.

ಹೌದು ಮಹಾರಾಷ್ಟ್ರದ ಯಾವತ್ಮಲ್ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಇಂಟ್ರೆಸ್ಟಿಂಗ್ ಟ್ವಿಸ್ಟ್ ಸಿಕ್ಕಿದೆ. ಒಂದು ಪ್ರಾಚೀನ ಮರದ ಮೌಲ್ಯ 1 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿತ್ತು. ಅದರಂತೆ ರೈಲ್ವೆ ಇಲಾಖೆ ಕೇವಲ ₹10,981 ರೂಪಾಯಿ ಮರವನ್ನ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವನ್ನ ಕೊಟ್ಟು ಖರೀದಿಸಿದೆ. ಈ ಕುರಿತಂತೆ ರೈತನಿಗೆ ಪಾವತಿಸಿದ ಹೆಚ್ಚುವರಿ ಹಣ ಮರುಪಾವತಿಸುವಂತೆ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಮೆಟ್ಟಿಲೇರಿದೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಖರ್ಶಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾರ್ಧಾ-ಯವತ್ಮಾಲ್-ಪುಸಾದ್-ನಾಂದೇಡ್ ರೈಲ್ವೆ ಯೋಜನೆಗಾಗಿ ರೈತ ಕೇಶವ್ ತುಕಾರಾಮ್ ಶಿಂಧೆ ಅವರ ಭೂಮಿ 2018 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಮಿಗೆ ಪರಿಹಾರ ಮೊತ್ತ ಪಾವತಿಸಿದ್ದರು. ಆಸ್ತಿಗಳಂತೆ ಮರಗಳಿಗೆ ಸಂಬಂಧಿಸಿದ ಪರಿಹಾರ ವಿಳಂಬವಾಗಿ ನೀಡಿ, ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅಧಿಕೃತ ದಾಖಲೆಗಳ ಪ್ರಕಾರ, ರೈತನ ಭೂಮಿಯಲ್ಲಿ ಒಂದು ಪ್ರಾಚೀನ ಮರ ಇದ್ದಿದ್ದು, ಅದನ್ನು ಮೌಲ್ಯವಂತ ರಕ್ತ ಚಂದನ ಎಂದು ಗುರುತಿಸಲಾಗಿತ್ತು. ಆ ಆಧಾರದ ಮೇಲೆ, ಹೈಕೋರ್ಟ್ ಮಧ್ಯಂತರ ಪರಿಹಾರವಾಗಿ ₹1 ಕೋಟಿ ರೂಪಾಯಿ ಪಾವತಿಸಲು ರೈಲ್ವೆ ಇಲಾಖೆಗೆ ಆದೇಶಿಸಿತು.

ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಮರದ ತಜ್ಞ ಪರಿಶೀಲನೆಗಾಗಿ, ಬೆಂಗಳೂರು ಮೂಲದ ಇನ್‌ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿಗೆ ಮರದ ನಿದರ್ಶನ ಕಳುಹಿಸಿದ್ದರು. ಪರೀಕ್ಷೆಯ ಫಲಿತಾಂಶದಲ್ಲಿ ಅದು ಬಿಜಸಲ್ ಮರ ಎಂದು ದೃಢವಾಯಿತು. ಇದು ಭಾರತದ ಸಾಮಾನ್ಯ ಮರಗಳಲ್ಲಿ ಒಂದಾಗಿದೆ. ಮರದ ನಿಜ ಮೌಲ್ಯ ಬಗ್ಗೆ ತಿಳಿಯೋದಾದ್ರೆ ಕೇವಲ ₹10,981 ರೂಪಾಯಿ.

ಈ ಭಾರಿ ಲೆಕ್ಕಾಚಾರದಿಂದ ಬೆಚ್ಚಿ ಬಿದ್ದ ರೈಲ್ವೆ ಇಲಾಖೆ ಈಗ ಹೈಕೋರ್ಟ್ ಮೊರೆ ಹೋಗಿದೆ. ತಪ್ಪಾಗಿ ಪಾವತಿಸಿದ ₹1 ಕೋಟಿ ಮೊತ್ತವನ್ನು ಮರಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಮರದ ಗುರುತಿನಲ್ಲಿ ನಡೆದ ತಪ್ಪು, ಸರ್ಕಾರಕ್ಕೆ ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss