ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್ ರಾಜ್ಯ ಸರ್ಕಾರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲಟ್ ಪೇಪರ್ ಬಳಸಲು ಕೈಗೊಂಡ ಮಹತ್ವದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಇವಿಎಂ ಕಾರ್ಯಕ್ಷಮತೆಯ ಮೇಲೆ ಹಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಸರ್ಕಾರ ಮತ್ತೆ ಬ್ಯಾಲಟ್ ಪೇಪರ್ ಬಳಕೆಗೆ ಮುಂದಾಗಿರುವುದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಗೊಳಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.
ಮತಗಳವು ವಾಮಮಾರ್ಗದ ಮೂಲಕ ಗೆಲ್ಲುವುದು ಪ್ರಜಾಪ್ರಭುತ್ವಕ್ಕೆ ಹಾನಿಕರವಾಗಿದೆ. ತಂತ್ರಜ್ಞಾನದಲ್ಲಿ ನಿಪುಣರಾದರೂ ಇವಿಎಂ ಯಂತ್ರವನ್ನು ಹ್ಯಾಕ್ ಮಾಡುವುದು ಅಸಾಧ್ಯವೆಂದು ನಂಬುವುದು ಕಷ್ಟ. ಕೇಂದ್ರ ಸರ್ಕಾರ ಇದನ್ನು ತಕ್ಷಣ ಗಮನಿಸಬೇಕು, ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಹಾನಿಯೇ ಸಂಭವಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕದಂತಹ ದೇಶಗಳು ಇಂದಿಗೂ ಮತಪತ್ರಗಳನ್ನು ಬಳಸುತ್ತಿವೆ. ಇದು ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡುವ ಕ್ರಮ. ಆದರೆ ಭಾರತದಲ್ಲಿ ಮತ ಎಣಿಕೆಯ ಸುಲಭತೆಗೆ ಇವಿಎಂ ಬಳಕೆಯೇ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಈ ಹೋರಾಟವನ್ನು ಮಾದರಿಯಾಗಿ ಪರಿಗಣಿಸಬೇಕು. ಬ್ಯಾಲಟ್ ಪೇಪರ್ ಮೂಲಕ ಮತ ಹಚ್ಚುವುದರಿಂದ ಮತದಾರರು ತಮ್ಮ ಮತವನ್ನು ನೇರವಾಗಿ ಗುರುತಿಸುತ್ತಾರೆ, ಆದ್ದರಿಂದ ಯಾವುದೇ ಅನುಮಾನ ಅಥವಾ ಗೊಂದಲ ಸಂಭವಿಸುವುದಿಲ್ಲ. ಅದರಿಂದ ರಾಜ್ಯ ಸರ್ಕಾರ ಬ್ಯಾಲಟ್ ಪೇಪರ್ ಬಳಕೆಗೆ ಒಲವು ತೋರಿರುವುದು ಸ್ವಾಗತಾರ್ಹವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ