ಲಾಡ್ಜ್‌ಗೆ ಕರೆಸಿ ವಕೀಲೆ ಮೇಲೆ ಅತ್ಯಾ*ಚಾರ!

ಪೊಲೀಸ್ ಕಾನ್ಸ್ಟೇಬಲ್ ಒಬ್ಬ ಮಹಿಳಾ ವಕೀಲೆಯನ್ನ ಲಾಡ್ಜ್‌ಗೆ ಕರೆಸಿಕೊಂಡು ರೇಪ್ ಮಾಡಿದ್ದಾನೆ. ವಕೀಲೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಈ ಆರೋಪದ ಮೇಲೆ ಮಂಗಳೂರಿನ ಪೊಲೀಸ್ ಕಾನ್‌ಸ್ಟೆಬಲ್ ಬಂಧನಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಂಧಿತನನ್ನು ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಗೌಡ ಅಲಿಯಾಸ್ ಸಿದ್ದಿ ಎಂದು ಗುರುತಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಸಿದ್ದೇಗೌಡ ಜಮಖಂಡಿ ಮೂಲದವನು. ಮಂಗಳೂರು ಪಾಂಡೇಶ್ವರದ SAF ವಿಭಾಗದಲ್ಲಿ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ. ಸಂತ್ರಸ್ತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದವರು, ಬೆಂಗಳೂರಿನಲ್ಲಿ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರಿಬ್ಬರು ಮೊದಲ ಬಾರಿ ಹುಬ್ಬಳ್ಳಿಯಲ್ಲಿ ನಡೆದ ಮದುವೆಯೊಂದರಲ್ಲಿ ಭೇಟಿಯಾದರು. ಮೊಬೈಲ್ ಸಂಖ್ಯೆಯ ವಿನಿಮಯದ ಮಾಡಿಕೊಂಡರು. ನಂತರ ಸಿದ್ದೇಗೌಡ ಸಂತ್ರಸ್ತೆಯೊಂದಿಗೆ ನಿಕಟ ಸಂಪರ್ಕ ಬೆಳೆಸಿದ್ದ. ನಂತರ ಮದುವೆಯ ಭರವಸೆ ನೀಡಿದ್ದಾನೆ. ಬೆಂಗಳೂರಿನಲ್ಲಿ ಲಾಡ್ಜ್ ಬುಕ್ ಮಾಡಿ ಸಂತ್ರಸ್ತೆಯನ್ನು ಕರೆಯಿಸಿಕೊಂಡು, ಆಕೆಯ ಒಪ್ಪಿಗೆಯ ವಿರೋಧವಾಗಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಗಳ ನಂತರ ಮದುವೆ ವಿಚಾರ ಸಿದ್ದೇಗೌಡ ಮುಂದೆ ಹಾಕಿದ್ದಾರೆ. ನೀವು ಕೀಳು ಜಾತಿಯವರು, ನಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎಂದು ಹೇಳಿದ್ದಾನೆ. ಇದಲ್ಲದೆ, ಸಂತ್ರಸ್ತೆಯಿಂದ ಹಣ ಸಹ ಪಡೆದುಕೊಂಡಿದ್ದನು. ಆ ಹಣವನ್ನು ವಾಪಸ್ಸು ನೀಡಿಲ್ಲ ಎಂಬುದಾಗಿ ದೂರು ನೀಡಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author