Friday, November 14, 2025

Latest Posts

ನಟಿ ಭಾವನಾ ಬಯಸಿದ್ದು ಎರಡು ಮಗು ದೊರಕಿದ್ದು ಒಂದು!

- Advertisement -

ಕನ್ನಡ ಸಿನಿಮಾ ನಟಿ ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆ ಹೆರಿಗೆ ಆಗಿದೆ. ಈಗ ಅವರು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಈಗ ಬಂದ ಮಾಹಿತಿ ಪ್ರಕಾರ, ನಟಿ ಭಾವನಾ ಅವರ ಎರಡು ಮಕ್ಕಳಲ್ಲಿ ಒಂದು ಮಗು ನಿಧನವಾಗಿದ್ದು ಮತ್ತೊಂದು ಮಗು ಕ್ಷೇಮವಾಗಿದೆ.

ಐವಿಎಫ್ ಮೂಲಕ ತಾಯಿ ಆಗಿದ್ದಾರೆ ನಟಿ ಭಾವನಾ. ವೈದ್ಯರ ಸೂಚನೆಯಂತೆ ಹೆರಿಗೆಯಾಗಿದೆ. ಒಂದು ಮಗುವಿನಲ್ಲಿ ಏಳು ತಿಂಗಳ ನಂತ್ರ ಸಮಸ್ಯೆ ಕಾಣಿಸಿಕೊಂಡ ಕಾರಣ, 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದಾರೆ.

ಖ್ಯಾತ ಕನ್ನಡ ನಟಿ ಭಾವನಾ ರಾಮಣ್ಣ ಅವರು IVF ಚಿಕಿತ್ಸೆಯ ಮೂಲಕ ತಾಯಿಯಾಗಲು ಬಯಸಿದವರು. ಇತ್ತೀಚೆಗೆ, ಅವರ ಸೀಮಂತ ಕಾರ್ಯಕ್ರಮವು ಅದ್ಧೂರಿಯಾಗಿ ನಡೆದಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರು ಶುಭ ಹಾರೈಸಿದ್ದರು. ಭಾವನಾ ಅವರ ಗರ್ಭಧಾರಣೆಯ ಸುದ್ದಿ ಈ ಹಿಂದೆ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಮದುವೆಯಾಗದೇ ಐವಿಎಫ್ ಮೂಲಕ ತಾಯಿಯಾಗುವ ಅವರ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅವರ ಈ ಧೈರ್ಯಶಾಲಿ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದರು.

ಭಾವನಾ ರಾಮಣ್ಣ ಈ ವಯಸ್ಸಿನಲ್ಲಿ ತಾಯಿಯಾಗಲು ನಿರ್ಧರಿಸಿದ ಅವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೈದ್ಯಕೀಯ ವರದಿಗಳ ಪ್ರಕಾರ, ಅವರ ಡೆಲಿವರಿ ದಿನಾಂಕವನ್ನು ನವೆಂಬರ್ 2025ರ ಸುಮಾರಿಗೆ ನಿಗದಿಪಡಿಸಲಾಗಿತ್ತು. ಆದರೆ, ಅವಧಿಗೂ ಮೊದಲೇ ಡೆಲಿವರಿ ಆಗಿದೆ. ಬಯಸಿದ್ದ ಎರಡು ಮಕ್ಕಳಲ್ಲಿ ಒಂದು ಮಗು ಮಾತ್ರ ದೊರಕಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss