Thursday, October 16, 2025

Latest Posts

ಶಿವಲಿಂಗ ಸ್ಪರ್ಶಿಸದ ಸೂರ್ಯರಶ್ಮಿ ಬೆಂಗಳೂರಿಗೆ ಗಂಡಾಂತರ!

- Advertisement -

ಈ ಬಾರಿ ಜನವರಿ 14ರ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರ ದೇವಾಲಯದಲ್ಲಿ ನಡೆಯುವ ವಿಶಿಷ್ಟ ದೃಶ್ಯ, ಶಿವಲಿಂಗದ ಮೇಲೆ ನೇರವಾಗಿ ಬೀಳುವ ಸೂರ್ಯಕಿರಣ ಕಾಣಿಸಲಿಲ್ಲ. ಸಾಮಾನ್ಯವಾಗಿ ಈ ದಿನದಂದು ಸೂರ್ಯನ ಕಿರಣಗಳು ಶಿವಲಿಂಗವನ್ನು ಬೆಳಗುತ್ತವೆ ಎಂಬುದು ಪರಂಪರೆ. ಆದರೆ ಈ ಬಾರಿ ಅದು ಸಾಧ್ಯವಾಗದ ಕಾರಣ, ಗ್ರಹಣದ ಪ್ರಭಾವ ಹೆಚ್ಚು ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಜಲಕಂಟಕ ಪರಿಸ್ಥಿತಿ ಉಂಟಾಗಿದೆ. ಜ್ಯೋತಿಷಿಗಳ ಪ್ರಕಾರ, ಗ್ರಹಣದ ಪರಿಣಾಮದಿಂದ ನದಿಗಳು, ಕೆರೆಗಳು ಉಕ್ಕಿ ಹರಿದು ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಬಾರಿ ಪ್ರಕೃತಿ ವೈಪರಿತ್ಯಗಳು ಇನ್ನಷ್ಟು ತೀವ್ರವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಗ್ರಹಣದ ಹಿನ್ನಲೆಯಲ್ಲಿ ಇಂದು ದೇವಾಲಯದಲ್ಲಿ ಶಿವನಿಗೆ ಕ್ಷೀರಾಭಿಷೇಕ ನೆರವೇರಿಸಲಾಗುತ್ತದೆ. ಅಭಿಷೇಕದ ನಂತರ ಮಹಾಮಂಗಳಾರತಿ ಜರುಗಲಿದ್ದು, ನಂತರ ದೇವಾಲಯವನ್ನು ದರ್ಬಾ ಬಂಧನ ವಿಧಿಯಿಂದ ಮುಚ್ಚಲಾಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ. ಈ ಸಮಯದಲ್ಲಿ ಭಕ್ತರಿಗೆ ದರ್ಶನ ಅವಕಾಶವಿರುವುದಿಲ್ಲ.

ಗ್ರಹಣ ಮುಗಿದ ನಂತರ, ಶಿವನಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳು ನಡೆಯಲಿವೆ. ನಾಳೆ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರ ಹೆಚ್ಚಿನ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss