ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್ ಜಟಾಪಟಿ ತಾರಕಕ್ಕೇರಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ನಡುವಿನ ಟಾಕ್ ವಾರ್ ಜೋರಾಗಿದೆ. ಈ ಬಾರಿ ಡಿ.ಕೆ. ಶಿವಕುಮಾರ್ ಆರೋಪಗಳಿಗೆಲ್ಲಾ, ನಿಖಿಲ್ ಕುಮಾರಸ್ವಾಮಿ ಖಡಕ್ ಟಾಂಗ್ ಕೊಟ್ಟಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರದಲ್ಲಿ ನಿಖಿಲ್ ಭಾಗಿಯಾಗಿದ್ರು. ಭಾಷಣದಲ್ಲಿ ಡಿಕೆಶಿ ವಿರುದ್ಧ ಗುಡುಗಿದ್ದಾರೆ.
ಮಿಸ್ಟರ್ ಶಿವಕುಮಾರ್ ಅವರೇ ಸುಳ್ಳು ನಿಮ್ಮನೆ ದೇವರು. ವಿಷಯ ತಿಳಿದುಕೊಂಡು ಮಾತಾಡಿ. ರೈತರ ಮುಂದೆ ಅಪಪ್ರಚಾರ ಮಾಡಿದ್ರೆ, ನಾವು ಕೈಕಟ್ಟಿ ಸುಮ್ಮೆ ಕುಳಿತುಕೊಳ್ಳಲ್ಲ.ಅನಿತಾ ಕುಮಾರಸ್ವಾಮಿ ಅವರು ಜಮೀನು ಪರಿಹಾರ ಕೇಳಿ ಅರ್ಜಿ ಹಾಕಿದ್ರೆ, ಆ ಜಮೀನನ್ನ ರೈತರಿಗೆ ಬಡವರಿಗೆ ದಾನ ಮಾಡ್ತೇವೆ.
ನಮ್ಮನೆ ವಿಚಾರ ನನಗೆ ಗೊತ್ತಿಲ್ವಾ..? ಡಿ.ಕೆ. ಶಿವಕುಮಾರ್‌ಗೆ ಗಾಳಿಯಲ್ಲಿ ಗುಂಡು ಹೊಡೆಯೋ ಅಭ್ಯಾಸ. ಅವರ ಆರೋಪಗಳೆಲ್ಲ ಸುಳ್ಳು. ಸುಳ್ಳೇ ಅವರ ಮನೆ ದೇವರು. ನಾವೇನಾದ್ರು ಜಮೀನು ಪರಿಹಾರಕ್ಕೆ ಅರ್ಜಿ ಹಾಕಿದ್ರೆ, ಆ ಜಮೀನನ್ನ ಬಡವರು, ರೈತರಿಗೆ ದಾನ ಮಾಡ್ತೇವೆ. ಹೀಗಂತ ಡಿಕೆ ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೇ ನಾವು ಅಲ್ಲಿ ಯಾವುದೇ ಶಿಕ್ಷಣ ಸಂಸ್ಥೆ, ದೊಡ್ಡ ದೊಡ್ಡ ಮಾಲ್‌ಗಳನ್ನ ಕಟ್ಟಿಕೊಂಡಿಲ್ಲ. ಕಂಡ ಕಂಡವರ ಜಮೀನಿಗೆ ಹೋಗಿಲ್ಲ. ಇನ್ನೂ, ಬಹಳ ವಿಷಯವಿದ್ದು, ರಾಮನಗರದಲ್ಲಿ ಬಂದು ಉತ್ತರ ಕೊಡ್ತೇನೆ. ರಾಮನಗರ ಜಿಲ್ಲೆಯಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ಇದ್ದಾರೆ. ಬಿಡದಿ ಟೌನ್ ಶಿಪ್ ವಿಚಾರವಾಗಿ ಎಷ್ಟು ಜನ ಹೋಗಿ ರೈತರ ಕಷ್ಟವನ್ನ ಕೇಳಿದ್ರಿ?. ರೈತರ ಮನೆಗೆ ಯಾರದ್ರೂ ಹೋಗಿದ್ರಾ.?
ಬನ್ನಿಗಿರಿ ಮತ್ತು ಹೊಸೂರು ಬಿಡದಿಯಲ್ಲಿ ಜಮೀನು ಖರೀದಿಸಿ 20 ವರ್ಷದ ಮೇಲೆ ಆಗಿದೆ. ಇದ್ರಲ್ಲಿ ಮುಚ್ಚು ಮರೆ ಏನು ಇಲ್ಲ. ಇದು ಕೃಷಿ ಜಮೀನು. ದೇವೇಗೌಡರು ಕುಮಾರಣ್ಣ ಮೂಲತಃ ಕೃಷಿಕರು, ರೈತರು. ಕೇತಗಾನಹಳ್ಳಿ ಜಮೀನಿನ ಮೇಲೆ SIT ರಚನೆ ಮಾಡಿದ್ರಿ. ಕೊನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಏನಾಯ್ತು?. ಡಿಕೆಶಿ ಅವರು ತಮ್ಮ ಬೆನ್ನು ತಾವೇ ಬೆನ್ನು ತಟ್ಟಿಕೊಳ್ತಿದ್ದಾರೆ. ನಮಗೂ ಕಾಲ ಬರುತ್ತೆ, ಅಧಿಕಾರ ಶಾಶ್ವತ ಅಲ್ಲ ಎಂದು ಡಿಕೆಶಿಗೆ, ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.