Tuesday, October 7, 2025

Latest Posts

CM ಶಾಂತಿದೂತರಿಂದಲೇ ಕಲ್ಲು ತೂರಾಟ.. ಸಿಟಿ ರವಿ ಆಕ್ರೋಶ!

- Advertisement -

ಮಂಡ್ಯದ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟಕ್ಕೆ BJP MLC ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಂತಿದೂತರನ್ನು ಹೊಗಳಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ತೀವ್ರ ಟೀಕೆ ಮಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ನೀವು ಎರಡು ದಿನದ ಹಿಂದೆ ಹೊಗಳಿದ ಶಾಂತಿದೂತರು ಈಗ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸಾಗರದಲ್ಲಿ ಗಣಪತಿಯ ವಿಗ್ರಹದ ಮೇಲೆ ಅವಹೇಳನಕಾರಿ ಕೃತ್ಯ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ಕೊಡುಗೆ ನೀಡಿದವರೇ ನೀವು ಹೊಗಳಿದ ಶಾಂತಿದೂತರು.

ಭಾರತವನ್ನು ವಿಭಜಿಸಿ ಅಖಂಡ ಭಾರತವನ್ನು ತುಂಡರಿಸಿದವರೂ ಅವರು. ಕಾಶ್ಮೀರದಲ್ಲಿ ರಾಷ್ಟ್ರಲಾಂಛನ ಅಶೋಕಚಕ್ರವನ್ನು ಒಡೆದು ಹಾಕಿದವರೂ ಇದೇ ಸಮುದಾಯ. ಇಂತಹವರನ್ನು ಶಾಂತಿದೂತರೆಂದು ಕೊಂಡಾಡಿದರೆ, ಮುಂದಿನ ದಿನಗಳಲ್ಲಿ ಸಂವಿಧಾನದ ಬದಲಿಗೆ ಷರಿಯಾ ಆಳುವ ಪರಿಸ್ಥಿತಿ ಬರಬಹುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವನ್ನು ಗೌರವಿಸದವರು ಸಂವಿಧಾನವನ್ನು ಹೇಗೆ ಉಳಿಸುತ್ತಾರೆ? ಎಂದು ಸಿ.ಟಿ ರವಿ ಪ್ರಶ್ನಿಸಿದ್ದಾರೆ.

ಮುಂದುವರೆದು ಅವರು, ಇನ್ನೆಷ್ಟು ದಿನ ಮತಗಳಿಗಾಗಿ ಸುಳ್ಳಿನ ಪ್ರಚಾರ? ಜನರಿಗೆ ಸತ್ಯ ತಿಳಿಸಿ, ಶಾಂತಿದೂತರ ನಿಜಸ್ವರೂಪವನ್ನು ಬಯಲಿಗೆಳೆಯಬೇಕು. ಆಗಲಾದರೂ ಜನರಿಗೆ ಅವರ ಹೀನ ಕೃತ್ಯಗಳು ಅರ್ಥವಾಗಬಹುದು, ಎಂದು ಸಿ.ಟಿ ರವಿ ಅವರು ತಿಳಿಸಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss