Wednesday, November 26, 2025

Latest Posts

ವಿಷಕ್ಕೆ ಅಂಗಲಾಚಿದ ನಟ ದರ್ಶನ್

- Advertisement -

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಪರಪ್ಪನ ಅಗ್ರಹಾರ ಸೇರಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ನರಕಯಾತನೆ ಅನುಭವಿಸುತ್ತಿದ್ದಾರೆ. ಡೆವಿಲ್ ಮಾನಸಿಕವಾಗಿ ಕುಸಿದು ಹೋಗಿದ್ದು, ಜಡ್ಜ್‌ ಎದುರು ವಿಷಕ್ಕಾಗಿ ಅಂಗಲಾಚಿದ್ದಾರೆ.

ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮತ್ತು ವಿಶೇಷ ಸೌಲಭ್ಯಗಳಿಗಾಗಿ ಮನವಿ ಮಾಡಿ, ಬೆಂಗಳೂರಿನ 57ನೇ CCH ನ್ಯಾಯಾಲದಲ್ಲಿ ಅರ್ಜಿ ವಿಚಾರಣೆ ನಡೆಸಲಾಯ್ತು. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ದರ್ಶನ್‌ ಹಾಜರಾಗಿದ್ರು. ಈ ವೇಳೆ ಮಂಕಾಗಿಯೇ ದರ್ಶನ್‌ ನಿಂತಿದ್ರು. ಮೊದಲು ಕೈ ಎತ್ತಿ ಮನವಿ ಇದೆ ಅಂತಾ ಸನ್ನೆ ಮೂಲಕ ತಿಳಿಸಿದ್ರು. ಜಡ್ಜ್‌ ಏನು ಅಂತಾ ಪ್ರಶ್ನಿಸಿದ್ದಕ್ಕೆ, ಡೈರೆಕ್ಟ್‌ ಆಗಿ ವಿಷಕ್ಕೆ ಮನವಿ ಮಾಡಿದ್ದಾರೆ.

ಜಡ್ಜ್‌ ಎದುರು ಗಳಗಳನೆ ಅತ್ತಿರುವ ದರ್ಶನ್‌, ಜೈಲಿನಲ್ಲಿ ನಾನು ಬೆಳಕನ್ನೇ ನೋಡಿಲ್ಲ. ಬಿಸಿಲು ನೋಡಿ 1 ತಿಂಗಳೇ ಆಯ್ತು. ಜೈಲು ಕೋಣೆಯಲ್ಲಿ ಫಂಗಸ್‌ ಸಮಸ್ಯೆ ಇದೆ. ಶುಚಿತ್ವದ ಕೊರತೆ ಇದ್ದು ನನಗೂ ಫಂಗಸ್‌ ಅಂಟಿದೆ. ಬಟ್ಟೆಗಳೆಲ್ಲಾ ಕೆಟ್ಟ ವಾಸನೆ ಬರ್ತಿದೆ. ಜೈಲಿನಲ್ಲಿ ಬದುಕುವುದಕ್ಕೆ ನನಗೆ ಆಗ್ತಿಲ್ಲ. ಜೈಲಾಧಿಕಾರಿಗಳಿಗೆ ಸೂಚಿಸಿ ವಿಷ ಕೊಡಿಸಿ. ಕೋರ್ಟ್‌ ಮೂಲಕವೇ ವಿಷ ನೀಡುವಂತೆ ಆದೇಶ ನೀಡಿ ಅಂತಾ, ಕಣ್ಣೀರಾಕಿದ್ದಾರೆ.

ನಟ ದರ್ಶನ್‌ ಬೇಡಿಕೆ ಕಂಡು, ನ್ಯಾಯಾಧೀಶರೇ ಶಾಕ್‌ ಆಗಿದ್ರು. ನೀವು ಹೇಳಿದಂತೆ ಆದೇಶ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ಏನು ಆದೇಶ ನೀಡ್ಬೇಕೋ ಕೊಡ್ತೇವೆ. ನಿಮ್ಮ ಅರ್ಜಿ ಬಗ್ಗೆ ಮಧ್ಯಾಹ್ನ ಆದೇಶ ನೀಡ್ತೇವೆ ಅಂತಾ, ಜಡ್ಜ್‌ ಹೇಳಿದ್ದಾರೆ. ಆದೇಶವನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಲಾಗಿದೆ.

ಸಿನಿಮಾಗಾಗಿ ಫಿಟ್ನೆಸ್‌ ಕಾಯ್ದುಕೊಳ್ತಿದ್ದ ದರ್ಶನ್‌, ಜೈಲಿನಲ್ಲಿ ವಿಲವಿಲ ಅಂತಿದ್ದಾರೆ. ಕಟ್ಟು ಮಸ್ತಾಗಿದ್ದ ದೇಹದ ತೂಕ ಇಳಿಕೆಯಾಗಿದೆ. ಸುಪ್ರೀಂಕೋರ್ಟ್‌ ಆದೇಶ ಹಿನ್ನೆಲೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಫುಲ್‌ ಸ್ಟ್ರಿಕ್ಟ್‌ ಮಾಡಲಾಗಿದೆ. ಯಾವುದೇ ವಿಶೇಷ ಸೌಲಭ್ಯಗಳಿಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ವ್ಯವಸ್ಥೆ ಮಾತ್ರ ದರ್ಶನ್‌ಗೆ ಸಿಕ್ತಿದೆ. ಮೊದಲ ಬಾರಿಗೆ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾಗ ರಾಯಲ್‌ ಟ್ರೀಟ್‌ಮೆಂಟ್‌ ಸಿಕ್ಕಿತ್ತು. ಜೈಲನ್ನೇ ರೆಸಾರ್ಟ್‌ ಆಗಿ ಬದಲಾಯಿಸಿಕೊಂಡಿದ್ರು. ಆದ್ರೆ, 2ನೇ ಬಾರಿಗೆ ಪರಪ್ಪನ ಅಗ್ರಹಾರದಲ್ಲಿ ನಿಜವಾದ ಜೈಲಿನ ದರ್ಶನವಾಗಿದೆ. ಜೈಲಿನ ವ್ಯವಸ್ಥೆಗೆ ದರ್ಶನ್‌ ಅಕ್ಷರಶಃ ನಲುಗಿಹೋಗಿದ್ದಾರೆ.

- Advertisement -

Latest Posts

Don't Miss