Tuesday, October 14, 2025

Latest Posts

ಮದ್ದೂರಿನಲ್ಲಿ ಕಲ್ಲು ತೂರಾಟ ನಂತರ ಮತ್ತೆ ಗಣೇಶ ವಿಸರ್ಜನೆಗೆ ಸಿದ್ಧತೆ!

- Advertisement -

ಮಸೀದಿಯ ಬಳಿ ನಡೆದ ಕಲ್ಲು ತೂರಾಟದ ಘಟನೆ ನಂತರ ಮದ್ದೂರಿನಲ್ಲಿ ಮತ್ತೆ ಗಣೇಶ ವಿಸರ್ಜನೆ ಮೆರವಣಿಗೆಗೆ ಸಿದ್ಧತೆ ಜೋರಾಗಿದೆ. ಸೆಪ್ಟೆಂಬರ್ 10ರಂದು 28 ಗಣಪತಿಗಳ ಸಾಮೂಹಿಕ ವಿಸರ್ಜನೆ ನಡೆಯಲಿದೆ. ಸುಮಾರು 20 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಡಾ. ಕೆ. ಸುಧಾಕರ್, ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ರಿಟಿಷ್ ಆಡಳಿತದಲ್ಲಿಯೂ ಗಣೇಶ ಮೆರವಣಿಗೆಗೆ ಅವಕಾಶ ಇತ್ತು.

ಆದರೆ ಇಂದು, ನಾವೇ ನಡಿಸಿರುವ ಕಾಂಗ್ರೆಸ್ ಸರ್ಕಾರದಲ್ಲಿ ಅದಕ್ಕೂ ಅನುಮತಿ ಕೇಳಬೇಕಾಗಿದೆ. ಶಾಂತಿಯುತ ಮೆರವಣಿಗೆಗೆ ಅನುಮತಿ ನೀಡದೆ, ಹಿಂದೂ ಧರ್ಮದ ಭಕ್ತರ ಭಾವನೆಗೆ ಅಪಮಾನ ಮಾಡಲಾಗುತ್ತಿದೆ, ಎಂದು ಅವರು ಗರಂ ಆದರು. ಜೊತೆಗೆ ರಾಜ್ಯ ಸರ್ಕಾರದ ಧೋರಣೆಯನ್ನು ಹಿಂದೂ ವಿರೋಧಿ ಎಂದು ಬಣ್ಣಿಸಿದರು.

ವರ್ಷಕ್ಕೆ ಒಮ್ಮೆ ಬರುವ ಗಣೇಶ ಹಬ್ಬಕ್ಕೂ ಅನುಮತಿ ಕೊಡಲ್ಲ. ಆದರೆ ಒಂದು ಧರ್ಮದವರಿಗೆ ಮಾತ್ರ ಎಲ್ಲಾ ಸೌಲಭ್ಯ. ಇದು ಸಕಾರಾತ್ಮಕ ಆಡಳಿತವಲ್ಲ. ಇದು ಬಹುಸಂಖ್ಯಾತರ ವಿರೋಧಿ ನೀತಿ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಭದ್ರಾವತಿ ಘಟನೆಯ ಕುರಿತಂತೆ, ವಿಧಾನಸೌಧದೊಳಗೆ ‘ಪಾಕಿಸ್ತಾನ ಜಿಂದಾಬಾದ್’ ಕೂಗಲಾಗುತ್ತಿದೆ. ಇದನ್ನೇ ಸಮರ್ಥಿಸುತ್ತಿರುವ ಕಾಂಗ್ರೆಸ್ ಪಕ್ಷ ಭಾರತಕ್ಕೆ ಅಪಾಯ ಉಂಟುಮಾಡುತ್ತಿದೆ. ಇಂಥವರು ದೇಶದ್ರೋಹಿಗಳೇ ಎಂದು ಅವರು ಕಿಡಿಕಾರಿದರು.

ಮದ್ದೂರಿನಲ್ಲಿ ಈ ಹಿಂದಿನ ಕಲ್ಲು ತೂರಾಟದ ಘಟನೆ ಬೆನ್ನಲ್ಲೇ, ಮೆರವಣಿಗೆಯ ದಿನದಂದು ಪೊಲೀಸ್ ಇಲಾಖೆ ಭಾರಿ ಭದ್ರತೆ ಒದಗಿಸಲಿದೆ. ಜಿಲ್ಲಾಡಳಿತವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಮುಖಂಡರು ಹಾಗೂ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss