Wednesday, September 24, 2025

Latest Posts

ಬೆಳಗಾವಿ ರಾಜಕಾರಣದಲ್ಲಿ ಆಣೆ-ಪ್ರಮಾಣ ಪಾಲಿಟಿಕ್ಸ್!

- Advertisement -

ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ, ಜಾರಕಿಹೊಳಿ ಕುಟುಂಬದ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಉಮೇಶ್‌ ಕತ್ತಿ ಬದುಕಿರುವ ತನಕ ಹಿಡಿತ ಸಾಧ್ಯವಾಗಿರಲಿಲ್ಲ. ಆದ್ರೀಗ, ಬದಲಾದ ಪರಿಸ್ಥಿತಿಯ ಲಾಭ ಪಡೆಯೋಕೆ, ಜಾರಕಿಹೊಳಿ ಫ್ಯಾಮಿಲಿ ಹವಣಿಸುತ್ತಿದೆ. 3 ದಶಕಗಳ ಕಾಲ ಪಾರಮ್ಯ ಸಾಧಿಸಿದ್ದ ಕತ್ತಿ ಕುಟುಂಬವನ್ನು, ಡಿಸಿಸಿ ಬ್ಯಾಂಕಿನಿಂದಲೇ ದೂರು ಇಡಲು, ಸ್ಟ್ರ್ಯಾಟಜಿ ರೂಪಿಸುತ್ತಿದ್ದಾರೆ. ಆದ್ರೆ, ಜಾರಕಿಹೊಳಿ ಕುಟುಂಬದ ತಂತ್ರಗಳಿಗೆ ಬದಲಾಗಿ, ಕತ್ತಿ ಫ್ಯಾಮಿಲಿ ಕೂಡ ಪ್ರತಿತಂತ್ರ ಹೆಣೆದಿದೆ. ಇದಕ್ಕಾಗಿ ಅಣೆ-ಪ್ರಮಾಣದ ಹಾದಿ ಹಿಡಿದಿದೆ.

ಅಕ್ಟೋಬರ್‌ 19ರಂದು ಡಿಸಿಸಿ ಬ್ಯಾಂಕ್‌ ಚುನಾವಣೆ ನಿಗದಿಯಾಗಿದೆ. ಇಷ್ಟು ವರ್ಷಗಳ ಕಾಲ ಡಿಸಿಸಿ ಬ್ಯಾಂಕ್‌ನತ್ತ ತಲೆ ಹಾಕದ ಜಾರಕಿಹೊಳಿ ಬ್ರದರ್ಸ್‌, ಈಗ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದಾರೆ. ಆದರೆ, ತಮ್ಮ ನಾಯಕನನ್ನ ಬಿಟ್ಟುಕೊಡಲು ಒಪ್ಪದ ಹುಕ್ಕೇರಿ ತಾಲೂಕಿನ ಹಲವು ಗ್ರಾಮಸ್ಥರು, ಅಣೆಯ ಮೊರೆ ಹೋಗಿದ್ದಾರೆ. ಉಮೇಶ್‌ ಕತ್ತಿ ಅವರನ್ನೇ ಬೆಂಬಲಿಸುತ್ತೇವೆ ಎಂದು, ಗ್ರಾಮ ದೇವತೆಯ ಮೇಲೆ ಪ್ರಮಾಣ ಮಾಡ್ತಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಹುಕ್ಕೇರಿ ತಾಲೂಕಿನ ಅಮ್ಮಣಗಿ, ಶಿರಗಾಂವ, ಎಲ್ಲಿಮುನ್ನಹಳ್ಳಿ, ಶಿರಹಟ್ಟಿ ಬಿ.ಕೆ. , ಶಿರಹಟ್ಟಿ ಕೆ.ಡಿ. , ಘೋಡಗೇರಿ, ಸೊಲ್ಲಾಪುರ, ಕಡಹಟ್ಟಿ, ಹುಲ್ಲೋಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ, ಬಹಿರಗವಾಗಿ ಪ್ರತಿಜ್ಞೆ ಮಾಡುತ್ತಿದ್ದಾರೆ. ಇದು ಕತ್ತಿ ಕೋಟೆ ಭೇದಿಸೋಕೆ ಹೊರಟ ಜಾರಕಿಹೊಳಿ ಫ್ಯಾಮಿಲಿಗೆ ದೊಡ್ಡ ತಲೆನೋವಾಗಿದೆ.

- Advertisement -

Latest Posts

Don't Miss