Wednesday, September 24, 2025

Latest Posts

ಕಾಂತಾರ 2 ಕೇರಳದಲ್ಲಿನಿಷೇಧ : FIOC ಶಾಕ್ ಘೋಷಣೆ

- Advertisement -

ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕಾಂತಾರ ಅಧ್ಯಾಯ-1’ಚಿತ್ರ ಕೇರಳದಲ್ಲಿ ಬಿಡುಗಡೆಗೆ ಮುನ್ನವೇ ವಿವಾದಕ್ಕೆ ಸಿಲುಕಿದೆ. ರಾಜ್ಯದ ಚಿತ್ರಮಂದಿರ ಮಾಲೀಕರ ಸಂಘ ಫಿಲ್ಮ್ ಎಕ್ಸಿಬಿಟರ್ಸ್ ಯುನೈಟೆಡ್ ಆರ್ಗನೈಜೇಶನ್ ಆಫ್ ಕೇರಳ (FIOC) ಚಿತ್ರವನ್ನು ಕೇರಳದಲ್ಲಿ ಪ್ರದರ್ಶಿಸದಿರಲು ತೀರ್ಮಾನಿಸಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ, ವಿತರಕರು ಚಿತ್ರದ ಮೊದಲ ಎರಡು ದಿನಗಳ ಕಲೆಕ್ಷನ್‌ನಲ್ಲಿ ಶೇಕಡಾ 55ರಷ್ಟಕ್ಕೆ ಬೇಡಿಕೆ ಇಟ್ಟಿರುವುದು ಈ ವಿವಾದಕ್ಕೆ ಕಾರಣ. ಫಿಯೋಕ್‌ ಇದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ. ವಿತರಕರು ತಮ್ಮ ನಿಲುವನ್ನು ಬದಲಾಯಿಸದಿದ್ದರೆ, ಚಿತ್ರವನ್ನು ಕೇರಳದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದಂತೆ ನಿರ್ಧರಿಸಲಾಗಿದೆ ಎನ್ನಲಾಗಿದೆ.

ಕಾಂತಾರ ಅಧ್ಯಾಯ-1’ ಚಿತ್ರವು ಅಕ್ಟೋಬರ್ 2 ರಂದು ಜಾಗತಿಕವಾಗಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆದಿದೆ. ಕೇರಳದಲ್ಲಿ ಚಿತ್ರದ ವಿತರಣೆಯನ್ನು ಪೃಥ್ವಿರಾಜ್ ಪ್ರೊಡಕ್ಷನ್ಸ್ ಹೊಣೆ ಹೊತ್ತಿದೆ.

2022ರಲ್ಲಿ ಬಿಡುಗಡೆಯಾದ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಮೊದಲ ಭಾಗವು ಭಾರೀ ಯಶಸ್ಸು ಕಂಡಿತ್ತು. ಕೇವಲ ಕರ್ನಾಟಕದಲ್ಲೇ ಅಲ್ಲದೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಚಿತ್ರ ಮೆಚ್ಚುಗೆ ಗಳಿಸಿತ್ತು. ಅದೇ ಉತ್ಸಾಹದಿಂದ ‘ಕಾಂತಾರ ಅಧ್ಯಾಯ-1’ ಕುರಿತ ನಿರೀಕ್ಷೆಗಳು ತುಂಬಾ ಹೆಚ್ಚಾಗಿವೆ.

ಕಾಂತಾರ ಅಧ್ಯಾಯ-1 ಚಿತ್ರವನ್ನು ‘ಕೆಜಿಎಫ್’, ‘ಸಲಾರ್’ ಮುಂತಾದ ಬ್ಲಾಕ್‌ಬಸ್ಟರ್‌ಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ. ಕಥೆಯು ಮೊದಲ ಭಾಗದಲ್ಲಿ ಪ್ರೇಕ್ಷಕರು ನೋಡಿದ ಘಟನೆಗಳಿಗಿಂತ ಹಿಂದಿನ ಕಾಲಘಟ್ಟದಲ್ಲಿ ನಡೆಯುವ ಘಟನೆಗಳ ಬಗ್ಗೆ ಬೆಳಕು ಚೆಲ್ಲಲಿದೆ. ಇದರಿಂದಾಗಿ ಕಥಾ ಹಂದರದ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಹೆಚ್ಚಿದೆ. ಅದರ ಜೊತೆಗೆ, ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ವಿಭಿನ್ನ ಶೈಲಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಪ್ರೇಕ್ಷಕರ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ. ಭವ್ಯ ಸೆಟ್‌ಗಳು, ಸ್ಥಳೀಯ ಜನಪದ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಅಂಶಗಳ ಸಂಯೋಜನೆ ಈ ಬಾರಿ ಮತ್ತಷ್ಟು ಆಕರ್ಷಕವಾಗಲಿದೆ ಎಂಬ ಭರವಸೆ ಮೂಡಿಸಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss