ಧರ್ಮಸ್ಥಳ ಪ್ರಕರಣದ ಬುರುಡೆ ಗ್ಯಾಂಗ್ಗೆ ಎಸ್ಐಟಿ ಅಧಿಕಾರಿಗಳು ಸಖತ್ ಗ್ರಿಲ್ ಮಾಡ್ತಿದ್ದಾರೆ. ನಿರಂತರವಾಗಿ ಹಲವರ ವಿಚಾರಣೆ ನಡೀತಿದೆ. 7ನೇ ದಿನ ಮಟ್ಟಣ್ಣವರ್ ವಿಚಾರಣೆಗೆ ಬಂದಿದ್ರೆ, 8ನೇ ದಿನವೂ ಸಾಮಾಜಿಕ ಕಾರ್ಯಕರ್ತ ಜಯಂತ್ ವಿಚಾರಣೆ ನಡೆಸಲಾಗ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ, ವಿಚಾರಣೆ ನಡೀತಿದೆ.
ಮಹೇಶ್ ತಿಮರೋಡಿ, ಮಟ್ಟಣ್ಣವರ್, ಜಯಂತ್, ಪ್ರದೀಪ್, ಯೂಟ್ಯೂಬರ್ ಅಭಿಷೇಕ್, ಮುನಾಫ್, ವಿಠಲ್ ಗೌಡಗೆ ಸಂಕಷ್ಟ ಎದುರಾಗಿದೆ. ಇವರೆಲ್ಲರಿಗೂ ಬಂಧನದ ಭೀತಿ ಶುರುವಾಗಿದೆ. ಸಾಕ್ಷಿದಾರರ ಹೇಳಿಕೆಗಳನ್ನು ಬೇರೆ ಸಾಕ್ಷ್ಯಗಳ ಜೊತೆ ಹೋಲಿಕೆ ಮಾಡಲಾಗುತ್ತದೆ. ಈಗಾಗಲೇ ಸಿಆರ್ಪಿಸಿ 161 ಅಡಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದು, ಮೊಬೈಲ್, ಲ್ಯಾಪ್ಟಾಪ್, ಕ್ಯಾಮೆರಾಗಳನ್ನು ವಶಕ್ಕೆ ಪಡೆಯಲಾಗಿದೆ. ವ್ಯತಿರಿಕ್ತ ಹೇಳಿಕೆಗಳು ಕಂಡುಬಂದ್ರೆ, ತಕ್ಷಣವೇ ಬಂಧನ ಮಾಡುವ ಸಾಧ್ಯತೆ ಇದೆ.
ಇಷ್ಟು ದಿನ ನಾವೆಲ್ಲಾ ಒಂದೇ ಅಂತಾ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದವರು, ಇದೀಗ ಬೇರೆ ಬೇರೆ ಆಗಿದ್ದಾರೆ. ತಿಮರೋಡಿ, ಮಟ್ಟಣ್ಣವರ್ ನಡುವೆ ಬಿರುಕು ಮೂಡಿರುವ ಅನುಮಾನ ಶುರುವಾಗಿದೆ. ಧರ್ಮಸ್ಥಳಕ್ಕೆ ಬಂದ್ರೆ, ಯಾವಾಗಲೂ ತಿಮರೋಡಿ ಮನೆಯಲ್ಲಿ ಮಟ್ಟಣ್ಣವರ್ ಉಳಿದುಕೊಳ್ಳುತ್ತಿದ್ರು. ಆದ್ರೀಗ ಸೌಜನ್ಯ ಮನೆಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಇನ್ನೂ ಕೆಲವರು ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.
ಧರ್ಮಸ್ಥಳಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್, ಬರ್ತಿದ್ದಾರೆ. ಸಂಜೆ 5 ಗಂಟೆಗೆ ಶ್ರೀಕ್ಷೇತ್ರಕ್ಕೆ ಭೇಟಿಕೊಡ್ತಿದ್ದು, ಮುಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ದೇಗುಲದ ಎದುರು ಆರತಿ ಸೇವೆ ಮಾಡಲಿದ್ದಾರೆ. ಬಳಿಕ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡುವ ಸಾಧ್ಯತೆ ಇದೆ.