ಕಲ್ಲು ತೂರಾಟ ಘಟನೆ ಬಳಿಕ ಮದ್ದೂರಿನಲ್ಲಿ, ಹಿಂದುತ್ವದ ಕೂಗು ಜೋರಾಗಿದೆ. ಈ ಅವಕಾಶವನ್ನೇ ಬಳಸಿಕೊಂಡು ರಾಜ್ಯ ಬಿಜೆಪಿ ನಾಯಕರು, ಮದ್ದೂರಿನಲ್ಲಿ ಹಿಂದುತ್ವದ ಕಹಳೆ ಮೊಳಗಿಸಿದ್ರು. ಬಳಿಕ ಹಿಂದೂ ಫೈರ್ ಬ್ರ್ಯಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಎಂಟ್ರಿ ಕೊಟ್ಟಿದ್ದಾರೆ.
ಸೆಪ್ಟೆಂಬರ್ 9ರಂದು ಬೆಳ್ಳಂಬೆಳಗ್ಗೆಯೇ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ದೌಡಾಯಿಸಿದ್ರು. ಮಧ್ಯಾಹ್ನದ ಬಳಿಕ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಂಟ್ರಿ ಕೊಟ್ಟಿದ್ರು. ಸೆಪ್ಟೆಂಬರ್ 10ರಂದು ರಾಜ್ಯ ಬಿಜೆಪಿ ನಾಯಕರು, ಸೆಪ್ಟೆಂಬರ್ 11ರಂದು ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್, ಕಹಳೆ ಮೊಳಗಿಸಿದ್ರು.
ಆದ್ರೆ, ಮಂಡ್ಯ ಸಂಸದ ಹೆಚ್.ಡಿ. ಕುಮಾರಸ್ವಾಮಿ ಮಾತ್ರ ಬಂದಿಲ್ಲ. ಟ್ವೀಟ್ ಮತ್ತು ವಿಡಿಯೋ ಮೂಲಕವೇ, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಧಿಕಾರಿಗಳ ಬಳಿ ಫೋನ್ ಮೂಲಕವೇ ಮಾಹಿತಿ ಸಂಗ್ರಹಿಸಿದ್ದಾರೆ. ಜೆಡಿಎಸ್ ಜಿಲ್ಲಾ ನಾಯಕರು, ಕಾರ್ಯಕರ್ತರಿಗೆ ಹೆಚ್‌ಡಿ ಕುಮಾರಸ್ವಾಮಿ ಮಂಡ್ಯಕ್ಕೆ ಬರಲೇಬೇಕೆಂಬ ಕೂಗು ಕೇಳಿ ಬಂದಿದೆ.
ಸೆಪ್ಟೆಂಬರ್ 10ರಂದು ಉಪರಾಷ್ಟ್ರಪತಿ ಚುನಾವಣೆ ನಡೆದಿದ್ದು, ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಜಯಗಳಿಸಿದ್ದಾರೆ. ಸೆಪ್ಟೆಂಬರ್ 12ರಂದು ಭಾರತದ 15ನೇ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕೂಡ ಭಾಗಿಯಾಗಿದ್ರು.
ಹೀಗಾಗಿ ನೂತನ ಉಪರಾಷ್ಟ್ರಪತಿಗಳ ಪ್ರಮಾಣ ವಚನ ಕಾರ್ಯಕ್ರಮ ಮುಗಿಸಿಕೊಂಡು, ಮಂಡ್ಯಕ್ಕೆ ಬರುವ ಸಾಧ್ಯತೆ ಇದೆ. ಎರಡ್ಮೂರು ದಿನಗಳಲ್ಲಿ ಮಂಡ್ಯಕ್ಕೆ ಹೆಚ್‌ಡಿಕೆ ಬರಲಿದ್ದಾರೆ ಎನ್ನಲಾಗ್ತಿದೆ.
ಒಟ್ನಲ್ಲಿ ಬಿಜೆಪಿಗರು ಶೋಭಾಯಾತ್ರೆಗಷ್ಟೇ ಸೀಮಿತವಾಗಿದ್ರು. ಯತ್ನಾಳ್ ಎಂಟ್ರಿಯಿಂದ ಮದ್ದೂರಲ್ಲಿ ಹಿಂದುಗಳ ಹವಾ ಜೋರಾಗಿದೆ. ಇನ್ನು, ಹೆಚ್.ಡಿ. ಕುಮಾರಸ್ವಾಮಿ ಬಂದ ಬಳಿಕ, ಮದ್ದೂರಿನಲ್ಲಿ ಏನಾಗಲಿದೆ, ಯಾವ ಕ್ರಾಂತಿ ಮೊಳಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.




