Tuesday, September 23, 2025

Latest Posts

ಹಿಂದೂತ್ವದಲ್ಲಿ ಸಮಾನತೆ ಇಲ್ಲ, ಅದಕ್ಕೆ ಮತಾಂತರ ನಡೀತಿದೆ – ಸಿಎಂ ಸಿದ್ದರಾಮಯ್ಯ!!!

- Advertisement -

ಹಿಂದೂ ಸಮಾಜದಲ್ಲಿ ಸಮಾನತೆ ಇಲ್ಲ. ಅದರಿಂದಲೇ ಮತಾಂತರ ನಡೆಯುತ್ತಿದೆ. ಹಿಂದೂ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಬೇರೆ ಧರ್ಮಗಳಿಗೆ ಮತಾಂತರಗೊಳ್ಳುತ್ತಾರೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಜಾತಿಗಣತಿ ಹಾಗೂ ಮತಾಂತರದ ಕುರಿತಂತೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಸಮಾನತೆ ಮತ್ತು ಅಸ್ಪೃಶ್ಯತೆ ನಮ್ಮ ಸಮಾಜದಲ್ಲಿಯೇ ಇನ್ನು ಇವೆ. ಅವುಗಳೇ ಕೆಲವರನ್ನು ಬೇರೆ ಧರ್ಮಗಳತ್ತ ತಳ್ಳುತ್ತಿವೆ. ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ, ಎಲ್ಲರಿಗೂ ಸಮಾನ ಅವಕಾಶಗಳಿದ್ದರೆ ಜನ ಯಾಕೆ ಮತಾಂತರಗೊಳ್ಳುತ್ತಿದ್ದರು. ಅಸ್ಪೃಶ್ಯತೆ ಯಾಕೆ ಬಂತು? ಅದನ್ನು ನಾವು ಹುಟ್ಟು ಹಾಕಿದ್ದೇವಾ? ಎಂದು ಪ್ರಶ್ನಿಸಿದರು.

ಜನರು ಸ್ವಯಂ ಇಚ್ಛೆಯಿಂದ ಮತಾಂತರಗೊಳ್ಳುತ್ತಿದ್ದಾರೆ. ಅಸಮಾನತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲಾ ಧರ್ಮದಲ್ಲಿ ಇದ್ದರೂ, ಮತಾಂತರ ಆಗಿ ಎಂದು ಹೇಳಿಲ್ಲ. ಯಾರನ್ನೂ ಕೂಡ ಬೇರೆ ಧರ್ಮಕ್ಕೆ ಕನ್ವರ್ಟ್ ಆಗು ಅಂತ ಕಾಂಗ್ರೆಸ್ ಹೇಳಿಲ್ಲ, ಬಿಜೆಪಿ ಕೂಡ ಹೇಳಿಲ್ಲ. ಆದರೆ ಅವರು ಮತಾಂತರವಾಗುತ್ತಿದ್ದಾರೆ. ಅದು ಅವರ ಹಕ್ಕು ಎಂದಿದ್ದಾರೆ.

ಜಾತಿಗಣತಿ ಹೆಸರಿನಲ್ಲಿ ಕಾಂಗ್ರೆಸ್ ಹೊಸ ಜಾತಿಗಳನ್ನು ಸೃಷ್ಟಿ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಉತ್ತರ ನೀಡಿದರು. ಜಾತಿ ಗಣತಿ ಕೇಂದ್ರ ಸರ್ಕಾರವೇ ಮಾಡುತ್ತಿದೆ. ಕನ್ವರ್ಟ್ಡ್ ಜನರ ಮಾಹಿತಿ ಪಡೆಯಲು ಹೊಸ ಕಾಲಮ್‌ಗಳನ್ನೇ ಸೇರಿಸಲಾಗಿದೆ. ಈ ದೇಶದ ಯಥಾರ್ಥ ತಿಳಿದುಕೊಳ್ಳಲು ಇದು ಅಗತ್ಯ ಎಂದಿದ್ದಾರೆ.

ಸಿಎಂ ಹೇಳಿಕೆ ಹಿಂದೂ ಸಮುದಾಯದ ಅಂತರಂಗದ ಸಮಸ್ಯೆಗಳತ್ತ ದಿಕ್ಕು ತೋರಿಸುವಂತಿದ್ದು, ರಾಜಕೀಯವಾಗಿ ಇದಕ್ಕೆ ಪ್ರತಿಸ್ಪಂದನೆಗಳು ನಿರೀಕ್ಷೆಯಲ್ಲಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss