ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸದ ಪಾರ್ಕಿಂಗ್ ಬಳಿ ನಂಬರ್ ಪ್ಲೇಟ್ ಬದಲಾಯಿಸಲಾದ ಫಾರ್ಚುನರ್ ಕಾರು ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ತಮ್ಮ ಪಾತ್ರವಿಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ವಿವಾದದಲ್ಲಿರುವ KA 42 P 6606 ನಂಬರ್‌ನ ಫಾರ್ಚುನರ್ ಕಾರು ಮಾಗಡಿಯ ಮಾಜಿ ಶಾಸಕ ಎ. ಮಂಜುನಾಥ್ ಅವರದ್ದಾಗಿದೆ. ಈ ಕಾರು ಪೂರ್ವದಲ್ಲಿ ಅವರ ಪಕ್ಷದಲ್ಲಿದ್ದ ಕೃಷ್ಣಮೂರ್ತಿಗೆ ಅವರು ಓಡಾಡಲು ನೀಡಿದ್ದರು. ಆದರೆ ಇದೀಗ ಹಾಲಿ ಶಾಸಕ ಎ. ಮಂಜು ಸದಾಶಿವನಗರ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ನಂಬರ್ ಪ್ಲೇಟ್ ಬದಲಾವಣೆ ಮಾಡುವುದರಲ್ಲಿ ಕೃಷ್ಣಮೂರ್ತಿ ಉದ್ದೇಶಪೂರ್ವಕವಾಗಿ ಪಾಲ್ಗೊಂಡಿರಬಹುದು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದಾಶಿವನಗರ ಪೊಲೀಸರು ಕೃಷ್ಣಮೂರ್ತಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಕುದ್ದು ಕೃಷ್ಣಮೂರ್ತಿ ಅವರೇ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ನಾನು ಅವರ ಮಟ್ಟಕ್ಕೆ ಇಳಿದು ಕೆಳದರ್ಜೆಯ ರಾಜಕಾರಣ ಮಾಡುವ ವ್ಯಕ್ತಿ ಅಲ್ಲ. ನನ್ನದು ಅಪ್ಪಟ ಕರ್ನಾಟಕದ ಸಂಸ್ಕಾರ. ಅವರನ್ನು ಕೂಡ ಅದು ಅರಿವಾಗಬೇಕು ಎಂದು ಕೃಷ್ಣಮೂರ್ತಿ ತೀರ್ಮಾನಾತ್ಮಕವಾಗಿ ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ