ಕೃಷಿ ಮೇಳದಲ್ಲಿ ಕರಿಬಸವೇಶ್ವರ ಅಗ್ರೀ ಇಂಡಿಯಾ ಭರ್ಜರಿ ಪ್ರದರ್ಶನ!

ಧಾರವಾಡದಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಈ ಮಹತ್ವದ ಮೇಳದಲ್ಲಿ ರೈತರ ಕಲ್ಯಾಣಕ್ಕಾಗಿ ಕರಿಬಸವೇಶ್ವರ ಅಗ್ರೀ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಜೋರಾಗಿ ನಡೆಸುತ್ತಿದೆ. ಜೊತೆಗೆ ಮೇಳದಲ್ಲಿ ಸಾವಿರಾರು ರೈತರಿಗೆ ಸನ್ಮಾನ ಮಾಡಲಾಗಿದೆ.

ರೈತರ ಅಚ್ಚುಮೆಚ್ಚಿನ ಕೃಷಿ ಉಪಕರಣಗಳೆಂದೇ ಹೆಸರುವಾಸಿಯಾದ ಕರಿಬಸವೇಶ್ವರ ಅಗ್ರೀ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಳೆದ ಸುಮಾರು ವರ್ಷಗಳಿಂದ ರೈತರ ಬೇಡಿಕೆಯಂತೆ ಅತ್ಯುತ್ತಮ ಗುಣ ಮಟ್ಟದ ಕೃಷಿ ಉಪಕರಣಗಳನ್ನು ತಯಾರಿಸಿ ರೈತರಿಗೆ ವಿತರಣೆ ಮಾಡುತ್ತಿದೆ.‌ ಇದು ಧಾರವಾಡದಲ್ಲಿ ನಡೆಯುತ್ತಿರುವ ಈ ಕೃಷಿ ಮೇಳದಲ್ಲಿ ರೈತರಿಗೆ ಉಪಕರಣಗಳ ಕುರಿತು ಮಾಹಿತಿಯನ್ನು ನೀಡುತ್ತಿದೆ. ಸಂಸ್ಥೆಯ ಮಾಲೀಕರು ಈ ಕಾರ್ಯಕ್ರಮದ ಬಗ್ಗೆ ರೈತರಿಗೆ ವಿವರಿಸಿದ್ದಾರೆ.

ಕೃಷಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಸ್ಪ್ರಿಂಕ್ಲರ್‌ಗಳ ವಿತರಣೆಯಲ್ಲಿ ಈ ಸಂಸ್ಥೆ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಹಸ್ರಾರು ರೈತರಿಗೆ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ 5,000ಕ್ಕೂ ಅಧಿಕ ರೈತ ಹಾಗೂ ಮಹಿಳಾ ರೈತರಿಗೆ ಸನ್ಮಾನ ಮಾಡಲಾಗಿದೆ. ಇನ್ನು ಸಂಸ್ಥೆಯ ಈ ಕಾರ್ಯಕ್ಕೆ ರೈತವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.

ಕರಿಬಸವೇಶ್ವರ ಅಗ್ರೀ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರೈತರ ಬಾಳಿಗೆ ಬೆಳಕಾಗಿ, ವಿಶ್ವಾಸಾರ್ಹವಾಗಿ ಕೆಲಸ ಮಾಡುತ್ತಿದೆ. ಕೃಷಿ ಉಪಕರಣಗಳಿಗಾಗಿ ನೀವು ಕೂಡ ಸಂಪರ್ಕಿಸಬಹುದು. ವಿಳಾಸ – ಮಹಾಲಕ್ಷ್ಮಿ ಇಂಪ್ಲಿಮೆಂಟ್ಸ್ ಪಕ್ಕದಲ್ಲಿ, W-69, ವುಮೆನ್ಸ್ ಪಾರ್ಕ್ ಪಕ್ಕ, KIADB ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾ, ಧಾರವಾಡ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 97432 46066

ವರದಿ : ಲಾವಣ್ಯ ಅನಿಗೋಳ

About The Author