ಬೆಂಗಳೂರು ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 17 ಬುಧವಾರದಂದು ಮತ್ತು ಸೆಪ್ಟೆಂಬರ್ 18 ಗುರುವಾರರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ನೀಡಿದೆ.
ರಾಜಾನುಕುಂಟೆ ಹಾಗೂ ಸಾರಕ್ಕಿ ಉಪಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ರಾಜಧಾನಿಯ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಲು ಮತ್ತು ತಮ್ಮ ದಿನಚರಿಯನ್ನು ಇದಕ್ಕೆ ಅನುಗುಣವಾಗಿ ರೂಪಿಸಿಕೊಳ್ಳುವಂತೆ ಬೆಸ್ಕಾಂ ಮನವಿ ಮಾಡಿದೆ.
ಹಾಗಾದ್ರೆ ಸೆಪ್ಟೆಂಬರ್ 17 ರಂದು ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ ಅನ್ನೋದನ್ನ ನೋಡೋದಾದ್ರೆ ಸಿಂಗ ನಾಯಕನಹಳ್ಳಿ, ಹೊನ್ನೇನಹಳ್ಳಿ, ಅಡ್ಡವಿಶ್ವನಾಥಪುರ, ರಾಜಾನು ಕುಂಟೆ, ಶ್ರೀರಾಮನಹಳ್ಳಿ, ಮಾರಸಂದ್ರ, ಹನಿಯೂರು, ನೆಲಕುಂಟೆ, ಕೆಎಂಎಫ್, ಚೆಲ್ಲ ಹಳ್ಳಿ, ಬೂದಮನಹಳ್ಳಿ, ಬೈರಾಪುರ, ಕಾಕೋಲು, ದಿಟ್ಟೂರು, ಸೊನ್ನೇನಹಳ್ಳಿ ಸೇರಿದಂತೆ ಸೆಂಚುರಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.
ಸೆಪ್ಟೆಂಬರ್ 18 ಕ್ಕೆ ಪೈಪ್ ಲೈನ್ ರೋಡ್, ಶಾಕಂಬರಿ ನಗರ, ರಾಘವೇಂದ್ರ ಸ್ವಾಮಿ ಮಠ, ಜೆ.ಪಿ ನಗರ ಮೊದಲನೇ ಹಂತ 14ನೇ ಅಡ್ಡ ರಸ್ತೆ, ಪುಟ್ಟೇನಹಳ್ಳಿ, ITI ಲೇಔಟ್, SBI ಕಾಲೋನಿ ಮತ್ತು RV ಡೆಂಟಲ್ ಕಾಲೇಜ್ ಹಾಗು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ.
ಸೆಪ್ಟೆಂಬರ್ 17 ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಹಾಗೂ ಗುರುವಾರ ಸೆಪ್ಟೆಂಬರ್ 18 ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಈ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಡಿತವಾಗುವ ಸಾಧ್ಯತೆ ಇದೆ. ಜನರು ತಮ್ಮ ಕೆಲಸ ಹಾಗೂ ದಿನಚರಿಯನ್ನು ಅನುಗುಣವಾಗಿ ಯೋಜಿಸಿಕೊಳ್ಳಬೇಕು ಅಂತ ಸೂಚನೆ ನೀಡಲಾಗಿದೆ.
ವರದಿ : ಲಾವಣ್ಯ ಅನಿಗೋಳ