ರಾಜ್ಯದಲ್ಲಿ ಪಂಚಮಸಾಲಿ-ವೀರಶೈವ ಲಿಂಗಾಯತ ಲಡಾಯಿ ಶುರುವಾಗಿದೆ. ಮರು ಜಾತಿ ಜನಗಣತಿಗೆ ಆದೇಶ ಬೆನ್ನಲ್ಲೇ, ಜಾತಿಯ ಕಾಲಂನಲ್ಲಿ ಏನೆಂದು ನಮೂದಿಸಬೇಕೆಂಬ ಚರ್ಚೆ ಜೋರಾಗಿದೆ. ಹೀಗಾಗಿ ಇಂದು ಮಹತ್ವದ ಸಭೆ ಕರೆಯಲಾಗಿದೆ. ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಭೆಯನ್ನು, ಪಂಚಮಸಾಲಿ ಸಮಾಜ ಆಯೋಜಿಸಿದೆ. 3 ಪೀಠಗಳ ಜಗದ್ಗುರುಗಳು, 80ಕ್ಕೂ ಹೆಚ್ಚು ವಿರಕ್ತ ಮಠಾಧೀಶರು ಭಾಗವಹಿಸಲಿದ್ದಾರೆ. ಇದೇ ಸಭೆಯಲ್ಲಿ ಅಂತಿಮ ನಿರ್ಣಯಕ್ಕೆ ಬರಲಿದ್ದಾರೆ.
ಈ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಈಗಾಗಲೇ ರಾಜ್ಯದ 14 ಜಿಲ್ಲೆಗಳಲ್ಲಿ ಸಭೆ ಸೇರಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಹಿಂದುಳಿದ ಸಮುದಾಯಗಳ ಪುನರ್ ಗಣತಿ ನಡೆಯುತ್ತಿದ್ದು, ಅದರಲ್ಲಿ1,561 ಜಾತಿಗಳಿವೆ. ಇದರಲ್ಲಿ3 ಕಡೆ ಪಂಚಮಸಾಲಿ ಪದ ಬಳಕೆಯಾಗಿದೆ. ಜೈನ್ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ ಮತ್ತು ವೀರಶೈವ ಪಂಚಮಸಾಲಿ ಅಂತಾ ಇದೆ. ಹೀಗಾಗಿ, ರಾಜ್ಯ ಮಟ್ಟದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರುವುದಾಗಿ ಹೇಳಿದ್ದಾರೆ.
ಇನ್ನು, ಸೆಪ್ಟೆಂಬರ್ 15ರಂದು ಹುಬ್ಬಳ್ಳಿಯಲ್ಲಿ, ಪಂಚಮಸಾಲಿ ಮುಖಂಡರು ಸಭೆ ನಡೆಸಿದ್ದಾರೆ. ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಅಧ್ಯಕ್ಷತೆಯಲ್ಲಿ, ಸಭೆ ನಡೆಸಲಾಗಿದೆ. 60ಕ್ಕೂ ಹೆಚ್ಚು ಮುಖಂಡರು ಸಮೀಕ್ಷೆ ಸಂದರ್ಭದಲ್ಲಿ, ಜಾತಿ ಕಾಲಂನಲ್ಲಿ ನಮೂದಿಸಬೇಕಾದ ಜಾತಿ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ.

