Tuesday, September 23, 2025

Latest Posts

ಜಾತಿ, ಉಪಜಾತಿಗಳನ್ನು ಕಾಂಗ್ರೆಸ್‌ ಒಡೆಯುತ್ತಿದೆ..

- Advertisement -

ಜಾತಿಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗ್ತಿವೆ. ಇದು ಕಾಂಗ್ರೆಸ್‌ ವಿರುದ್ಧ ಹೋರಾಡುತ್ತಿರುವ ಬಿಜೆಪಿಗರಿಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗಿದೆ. ಇದೇ ವಿಚಾರವಾಗಿ ಸಂಸದ ಡಾ. ಕೆ. ಸುಧಾಕರ್‌ ಗುಡುಗಿದ್ದು, ದೇಶವನ್ನು ಇಷ್ಟು ವರ್ಷ ಒಡೆದಿದ್ದು ಸಾಕಾಗಲಿಲ್ವಾ? ಈಗ ಕರ್ನಾಟಕದಲ್ಲಿ ಜಾತಿ, ಉಪಜಾತಿಗಳನ್ನು ಕಾಂಗ್ರೆಸ್‌ ಒಡೆಯುತ್ತಿದೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರದಲ್ಲಿ ಮಾತನಾಡಿರುವ ಕೆ. ಸುಧಾಕರ್‌, ಜಾತಿ ಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರ ಮಾತ್ರ ಜಾತಿ ಗಣತಿ ಮಾಡಬಹುದು. ಇದನ್ನು ಸಂವಿಧಾನದಲ್ಲೇ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ, ಉಪಜಾತಿಗಳನ್ನು ವಿಭಾಗಿಸುತ್ತಿದೆ ಅಂತಾ ಆರೋಪಿಸಿದ್ದಾರೆ. ಕಾಂಗ್ರೆಸ್ಸಿಗರು ಬಸವಣ್ಣನವರೇ ಆದರ್ಶ ಅಂತಾರೆ. ಹೀಗೆ ಜಾತಿ, ಉಪಜಾತಿಗಳನ್ನು ವಿಭಾಗಿಸಿ ಅಂತಾ ಅವರು ಹೇಳಿದ್ದಾರಾ?

ಪರಿಶಿಷ್ಟ ಜಾತಿ, ಪಂಗಡಗಳು ಸೇರಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಹಂಚಿಕೆ ಮಾಡುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲಾಗುತ್ತಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾಗಿಟ್ಟ ಹಣವನ್ನು, ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಈ ಸಮುದಾಯಗಳಿಗೆ ಮಾಡುವ ದ್ರೋಹ ಅಲ್ವಾ?

ಕಾಂತರಾಜು ಸಮಿತಿ ನೇಮಿಸಿದಾಗ 200ರಿಂದ 300 ಕೋಟಿ ಖರ್ಚು ಮಾಡಿದ್ರು. ಜನರ ತೆರಿಗೆ ಹಣವನ್ನು ಅವರಿಗೆ ಇಷ್ಟಬಂದ ರೀತಿ ಪೋಲು ಮಾಡಿದ್ದರೆ. ಹೀಗೆ ತೆರಿಗೆ ಹಣ ಪೋಲು ಮಾಡಲು ಅಧಿಕಾರ ಕೊಟ್ಟವರು ಯಾರು?. ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಸರ್ವವ್ಯಾಪಿ ಸರ್ವಸ್ಪರ್ಶಿ ಆಡಳಿತ ಅಂತಾ ಮುಖ್ಯಮಂತ್ರಿಗಳು ಹೇಳ್ತಾರೆ. ಅದೇ ರೀತಿಯಲ್ಲಿ ಸರ್ವವ್ಯಾಪಿ ಭ್ರಷ್ಟಾಚಾರ ನಡೀತಿದೆ ಅಂತಾ, ಸಂಸದ ಕೆ. ಸುಧಾಕರ್‌ ವ್ಯಂಗ್ಯವಾಡಿದ್ದಾರೆ.

- Advertisement -

Latest Posts

Don't Miss