ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಭಾಶಯ ಕೋರಿದ್ದಾರೆ. ರಷ್ಯಾ-ಭಾರತ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮೋದಿ ಅಗಾಧ ವೈಯಕ್ತಿಕ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಇಟಲಿ ಪ್ರಧಾನಿ ಮೆಲೋನಿ ಮತ್ತು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಮೆಲೋನಿ ಅವರು ಮೋದಿ ಅವರ ಶಕ್ತಿ ಮತ್ತು ದೃಢತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯಲಿ ಅಂತ ಶುಭ ಹಾರೈಸಿದರು. ಟ್ರಂಪ್ ಅವರು ರಾತ್ರಿ ಕರೆಮಾಡಿ ಶುಭ ಕೋರಿದ್ದು, ಇದು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಿವಾದದ ಬಳಿಕ ಅವರ ಮೊದಲ ಸಂಪರ್ಕವಾಗಿದೆ.
ಜೊತೆಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಕೂಡ ಮೋದಿ ಅವರನ್ನು ಆತ್ಮೀಯ ಮಿತ್ರ ನರೇಂದ್ರ ಎಂದು ಕರೆದು ಹುಟ್ಟು ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಭಾರತ-ಇಸ್ರೇಲ್ ಸ್ನೇಹವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಎದುರು ನೋಡುತ್ತಿದ್ದೇನೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಅಲ್ಬನೀಸ್ ಹಾಗೂ ನ್ಯೂಜಿಲೆಂಡ್‌ನ ಲಕ್ಸನ್ ಕೂಡಾ ಮೋದಿ ಅವರ ನಾಯಕತ್ವ ಹೊಗಳಿ ಮೋದಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.
ವರದಿ : ಲಾವಣ್ಯ ಅನಿಗೋಳ