ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಇನ್ನೇನು ಶುರುವಾಗಲಿದೆ. ಸೆಪ್ಟೆಂಬರ್ 28 ರಿಂದ ‘ಬಿಗ್ ಬಾಸ್’ ಆರಂಭವಾಗಲಿದೆ. ಅತ್ತ ಕಿಚ್ಚ ಸುದೀಪ್ ಕಾಣಿಸಿಕೊಂಡಿರುವ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇತ್ತ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿವೆ. ಈ ಬಾರಿ ಬಿಗ್ ಬಾಸ್ ಮನೆಗೆ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಅಂತೆಲ್ಲಾ ಅಂತೆ-ಕಂತೆಗಳನ್ನ ಕೇಳಿದ್ದೀರಾ, ನೋಡಿದ್ದೀರಾ! ಆದ್ರೆ ಈಗ ಲಿಸ್ಟ್ ಫೈನಲ್ ಆಗಿದೆ ಎನ್ನಲಾಗಿದೆ.
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ನಡೆಯುವ ಬಹು ನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಈ ನಡುವೆ, 18 ಸ್ಪರ್ಧಿಗಳ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯದ್ವಾತದ್ವಾ ಲೀಕ್ ಆಗಿರುವ ಈ ಪಟ್ಟಿ ಹತ್ತಕ್ಕಿಂತ ಹೆಚ್ಚು ಸ್ಪರ್ಧಿಗಳನ್ನು ನಿಜವಾಗಿಯೂ ಶೋಗೆ ಕರೆದುಕೊಳ್ಳುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ನಡೆದಿದೆ. ಈ ಇಡಿ ಲಿಸ್ಟ್ ಫೈನಲ್ ಆಗಿರಬಹುದು ಎಂಬ ಸುದ್ದಿಯೂ ಹೊರಬಿದ್ದಿದೆ.
ಹಾಗಾದ್ರೆ ಪಟ್ಟಿಯಲ್ಲಿ ಯಾರ್ಯಾರ ಪ್ರಮುಖ ಹೆಸರು ಇದೆ? ಅನ್ನೋದನ್ನ ನೋಡೋದಾದ್ರೆ ಧಾರಾವಾಹಿಗಳಲ್ಲಿ ಖ್ಯಾತಿ ಪಡೆದ ಕಲಾವಿದ ಸಾಗರ್ ಬಿಲ್ಲಿಗೌಡ, ಟೆಲಿವಿಷನ್ ನಟಿಯಾರದಂತಹ ಶ್ವೇತಾ ಪ್ರಸಾದ್ ಮತ್ತು ಸಂಜನಾ ಬುರ್ಲಿ ಇರಲಿದ್ದಾರಂತೆ. ಸುದ್ದಿ ನಿರೂಪಕಿ ದಿವ್ಯಾ ವಸಂತ್, ಸಮೀರ್ ಎಂಡಿ, ತನ್ನ ವಿಶಿಷ್ಟ ಶೈಲಿಯಿಂದ ಗಮನ ಸೆಳೆದಿರುವ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಇರಲಿದ್ದಾರೆ ಅನ್ನೋ ಪ್ರಮುಖ ಹೆಸರುಗಳು ಕೇಳಿ ಬಂದಿವೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಮಡೆಯೋಕೆ ಇನ್ನಷ್ಟು ಸಾಧ್ಯತೆಯಲ್ಲಿರುವ ಹೆಸರುಗಳು ಅಂದ್ರೆ ಮೇಘಾ ಶೆಟ್ಟಿ, ಸಂಖ್ಯಾಶಾಸ್ತ್ರಜ್ಞ ಅರವಿಂದ್ ರತನ್, ಯೂಟ್ಯೂಬ್ ಸೆನ್ಸೇಶನ್ ಪಾಯಲ್ ಚೆಂಗಪ್ಪ ಬರುವ ಸಾದ್ಯತೆಯಿದೆಯಂತೆ. ವರುಣ್ ಆರಾಧ್ಯಾ ಮತ್ತು ಗಗನಾ ಎರಡೂ ಹೆಸರಿನಲ್ಲೂ ಯಾರಾದರೂ ಒಬ್ಬರು ಇರಲಿದ್ದಾರಂತೆ. ಅಮೃತಾ ರಾಮಮೂರ್ತಿ, ಸುನೀಲ್ ಸಿಂಗರ್, ಬಾಳು ಬೆಳಗುಂದಿ, ಧನುಶ್, ಸ್ವಾತಿ ಎಂಬವರು ಕೂಡ ಲಿಸ್ಟ್ ನಲ್ಲಿದ್ದಾರೆ.
ಈ ಎಲ್ಲಾ ಹೆಸರುಗಳು ಅಧಿಕೃತವಾಗಿ ದೃಢವಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪಟ್ಟಿ ದೊಡ್ಡದಾದ ಚರ್ಚೆಗೆ ಕಾರಣವಾಗಿದೆ. ಶೋ ಆರಂಭವಾದ ನಂತರ ಮಾತ್ರ ಈ ಹೆಸರುಗಳಲ್ಲಿ ಎಷ್ಟು ನಿಜ, ಎಷ್ಟು ರೋಮಾಂಚಕ ಎಂಬುದು ಸ್ಪಷ್ಟವಾಗಲಿದೆ. ಕಿಚ್ಚ ಸುದೀಪ್ ಶೋ ನಡೆಸಿಕೊಡುವ ದಿನವನ್ನೇ ಇಡೀ ಕರ್ನಾಟಕ ತೀವ್ರ ನಿರೀಕ್ಷೆಯಿಂದ ಕಾಯುತ್ತಿದೆ.
ವರದಿ : ಲಾವಣ್ಯ ಅನಿಗೋಳ