Wednesday, October 15, 2025

Latest Posts

ಮೋಸದಿಂದಲೇ ಮೋದಿ, BJP ಚುನಾವಣೆ ಗೆದ್ದಿದೆ – ಸಂತೋಷ್ ಲಾಡ್‌

- Advertisement -

ರಾಹುಲ್ ಗಾಂಧಿ ವೋಟ್ ಚೋರಿ ಆರೋಪದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮೋಸದಿಂದಲೇ ಬಿಜೆಪಿ ಗೆದ್ದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ಸ್ಪಷ್ಟ ಉತ್ತರ ಕೂಡ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದೆ.

ವಿಧಾನಸೌಧದಲ್ಲಿ ಮಾತನಾಡಿದ ಸಂತೋಷ್ ಲಾಡ್, ಆಳಂದ ಪ್ರಕರಣದಿಂದ 5-6 ವರ್ಷ ಕಳೆದರೂ ಎಸ್‌ಐಟಿ ಹಲವು ಬಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ದೊರಕಿಲ್ಲ. ಮತಗಳು ಹೇಗೆ ಅಳಿಸಲ್ಪಟ್ಟವು ಎಂಬ ಪ್ರಶ್ನೆಗೆ ಉತ್ತರ ಸಿಗದೇ ಇದ್ದದ್ದು ಅನುಮಾನ ಹುಟ್ಟಿಸುವಂತಿದೆ ಎಂದರು.

ಬಿಹಾರದಲ್ಲಿ ಮೂರು ಲಕ್ಷ ಮನೆಗಳಿಗೆ ಜೀರೋ ನಂಬರ್ ನೀಡಿರುವ ಉದಾಹರಣೆ ನೀಡುತ್ತಾ, ನರೇಂದ್ರ ಮೋದಿ ಚುನಾವಣೆಗಳನ್ನು ಮೋಸದ ಮೂಲಕ ಗೆದ್ದಿದ್ದಾರೆ. ಮತ ಕಳ್ಳತನವೇ ಗೆಲುವಿನ ಮೂಲ ಎಂದು ನೇರ ಆರೋಪ ಮಾಡಿದರು. ಜೊತೆಗೆ, ಚುನಾವಣಾ ಆಯೋಗದ ನೇಮಕಾತಿ ವಿಧಾನ ಬದಲಾವಣೆಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಕಿಡಿಕಾರಿದರು.

ಈಗ ಮೋದಿ ಅವರ ಕುರಿತಾದ ಸಿನಿಮಾವೂ ಬರಬೇಕಾಗಿದೆ. ಸಾಧನೆ ಏನು ಎಂಬುದು ಗೊತ್ತಿಲ್ಲ, ಆದರೆ ದೇಶ ಹಾಳಾಗಬೇಕಾಗಿದೆ. ಒಬ್ಬ ಮನುಷ್ಯ ಪ್ರಸಿದ್ಧಿಯಾಗಬೇಕಾಗಿದೆ ಎಂಬ ಧೋರಣೆಯಾಗಿದೆ. ಕೊನೆಗೆ ಪಿಚ್ಚರ್ ನಿಮ್ಮದೇ, ಅದನ್ನೇ ಓಡಿಸುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು. ಅದಾನಿಗೆ ಒಂದು ರೂಪಾಯಿಗೆ ಸಾವಿರ ಎಕರೆ, ಹತ್ತು ಲಕ್ಷ ಮ್ಯಾಂಗೋ ಪ್ಲಾಂಟೇಶನ್ ನೀಡಿರುವುದನ್ನು ಉಲ್ಲೇಖಿಸಿ, ನಮ್ಮ ಸರ್ಕಾರಿ ಕಂಪನಿಗೆ ಏಕೆ ಕೊಡಬಾರದು? ಎಂದು ಪ್ರಶ್ನಿಸಿದರು. ಮೋದಿ ಸಾಹೇಬ್ರೇ ಮಜಾ ಮಾಡಿ, ಪಿಚ್ಚರ್ ಓಡಿಸಿ ಎಂದು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss