ಚಿತ್ರರಂಗಕ್ಕೆ ಯಾವುದೇ ಹಿನ್ನೆಲೆ ಇಲ್ಲದೆ ಬಂದು ಸ್ಟಾರ್ ಆಗಿ ಮೆರೆದ ದೀಪಿಕಾ ಪಡುಕೋಣೆ, ಮೊದಲೆಲ್ಲ ಕೆಲಸ ಮಾಡಿದ ನಿರ್ದೇಶಕರು ಮತ್ತು ನಿರ್ಮಾಪಕರಿಂದ ತಮ್ಮ ಪಾತ್ರದಲ್ಲಿ ತೊಡಗಿಕೊಳ್ಳುವ ಶ್ರಮ, ಕಮಿಟ್‌ಮೆಂಟ್ ನಿಂದ ಮೆಚ್ಚುಗೆ ಪಡೆದಿದ್ದರು. ಆದರೆ ತಾಯಿ ಆದ ನಂತರ ದೀಪಿಕಾ ಪಡುಕೋಣೆ ಬದಲಾಗಿದೆ ಎಂಬ ಅಭಿಪ್ರಾಯ ಬರುತ್ತಿದೆ. ಈಗ ಅವರು ಯಾವುದೇ ಕಥೆಯನ್ನು ಕೇಳುವ ಮೊದಲು ತಮ್ಮ ಡಿಮ್ಯಾಂಡ್‌ಗಳ ಪಟ್ಟಿಯನ್ನು ನಿರ್ದೇಶಕರು, ನಿರ್ಮಾಪಕರ ಮುಂದೆ ಇಡುತ್ತಿದ್ದಾರೆ.
ಈ ಬದಲಾವಣೆಯ ಪರಿಣಾಮ, ದೀಪಿಕಾ ಈಗಾಗಲೇ ಒಂದು ದೊಡ್ಡ ಸಿನಿಮಾ ಕಳೆದುಕೊಂಡಿದ್ದಾರೆ. ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದ ನಾಯಕಿಯಾಗಿ ಆಯ್ಕೆಯಾಗಬೇಕಿತ್ತು. ಆದರೆ, ದಿನಕ್ಕೆ ಕೇವಲ ಎಂಟು ಗಂಟೆ ಶೂಟಿಂಗ್ ಮಾಡಲು ಒಪ್ಪುವುದೆಂಬ ಷರತ್ತು ಮತ್ತು ಡಿಮ್ಯಾಂಡ್‌ಗಳ ಪಟ್ಟಿಯನ್ನು ಕೇಳಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತೃಪ್ತಿ ದಿಮ್ರಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದರು.
ಇದೇ ಕಾರಣದಿಂದ ಪ್ರಭಾಸ್ ನಟನೆಯ ಮತ್ತೊಂದು ದೊಡ್ಡ ಸಿನಿಮಾ ‘ಕಲ್ಕಿ 2898 ಎಡಿ’ ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆ ಹೊರಗುಳಿದ್ದಾರೆ. ಈ ಬಗ್ಗೆ ವೈಜಯಂತಿ ಮೂವೀಸ್ ಅಧಿಕೃತ ಟ್ವೀಟ್ ಮೂಲಕ ಘೋಷಿಸಿದ್ದಾರೆ. “ಎಚ್ಚರಿಕೆಯಿಂದ ಎಲ್ಲ ವಿಷಯಗಳನ್ನು ಪರಿಗಣಿಸಿ ದೀಪಿಕಾ ಅವರೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ಮೊದಲ ಸಿನಿಮಾದಲ್ಲಿ ಸುದೀರ್ಘ ಪಯಣ ಮಾಡಿಕೊಂಡರೂ ಸೀಕ್ವೆಲ್‌ನಲ್ಲಿ ಜೊತೆಯಾಗಲು ಸಾಧ್ಯವಾಗುತ್ತಿಲ್ಲ. ‘ಕಲ್ಕಿ 2898 ಎಡಿ’ ಹೆಚ್ಚಿನ ಶ್ರಮ, ಶ್ರದ್ಧೆಯನ್ನು ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಒಳಿತು ಬಯಸುತ್ತೇವೆ” ಎಂದು ನಿರ್ಮಾಪಕರು ಹೇಳಿದ್ದಾರೆ.
ನಿರ್ಮಾಣ ಸಂಸ್ಥೆಯು ಪರೋಕ್ಷವಾಗಿ, ದೀಪಿಕಾ ಪಡುಕೋಣೆ ಬದ್ಧತೆಯ ಕೊರತೆ ಮತ್ತು ಕಾನ್ಸ್ಟ್ರೇಂಟ್‌ಗಳು ಕಾರಣದಿಂದಲೇ ಸಿನಿಮಾ ಬಿಡಲಾಗಿದೆ ಎಂಬ ಅರ್ಥವೇ ಹೊರಹೊಮ್ಮಿಸುತ್ತದೆ. ಎಂಟು ಗಂಟೆ ಶೂಟಿಂಗ್ ಷರತ್ತು ಮತ್ತು ಡಿಮ್ಯಾಂಡ್‌ಗಳ ಪಟ್ಟಿಯನ್ನು ಒಪ್ಪಲು ಸಾಧ್ಯವಾಗದೆ ತಾವು ದಿಟ್ಟ ನಿರ್ಧಾರ ಕೈಗೊಂಡಿದ್ದಾರೇಂದಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

