Monday, October 6, 2025

Latest Posts

ಇದು ಕಲಿಯುಗದ ಪುಣ್ಯಕೋಟಿ ಕಥೆ!

- Advertisement -

ಮೈಸೂರು ಜಿಲ್ಲೆಯ ಹೆಚ್‌.ಡಿ ಕೋಟೆಯಲ್ಲಿ, ಥೇಟ್‌ ಪುಣ್ಯಕೋಟಿ ಕಥೆ ರೀತಿಯ ಘಟನೆ ನಡೆದಿದೆ. ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು, ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ರು. ಈ ಹಿನ್ನೆಲೆ ಚಿರತೆ ಸೆರೆಗೆ ಬೋನ್‌ ಇಟ್ಟಿದ್ದು, ಜೊತೆಗೆ ಬೋನಿನಲ್ಲಿ ಪುಟ್ಟ ಕರುವೊಂದನ್ನ ಕಟ್ಟಲಾಗಿತ್ತು.

ಆಶ್ಚರ್ಯಕರ ವಿಷ್ಯ ಅಂದ್ರೆ, ಬೋನಿಗೆ ಬಿದ್ದ ಚಿರತೆ, ಕುರುವನ್ನು ತಿನ್ನದೇ ಸೈಲೆಂಟ್‌ ಆಗಿ ಕುಳಿತುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಬೋನಿಗೆ ಬಿದ್ದ ಚಿರತೆ ನೋಡುತ್ತಿದ್ದಂತೆ, ಹಸುವಿನ ಕರು ಗಾಬರಿಯಾಗಿ ಅತ್ತಿಂದಿತ್ತ ಓಡಾಡಿದೆ. ಆದರೂ, ಚಿರತೆ ಮಾತ್ರ ಕರುವಿನ ಪಕ್ಕದಲ್ಲೇ ಕುಳಿತುಕೊಂಡು, ಜನರತ್ತ ನೋಡಿ ಘರ್ಜಿಸುತ್ತಿತ್ತು. ಪುಟ್ಟ ಕರುವನ್ನು ಚಿಕ್ಕ ಹಾನಿಯನ್ನೂ ಮಾಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಫುಲ್‌ ವೈರಲ್‌ ಆಗಿದೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿವೆ. ಪುಣ್ಯಕೋಟಿ ಕಥೆಯ ಬಗ್ಗೆ ಫುಲ್‌ ಚರ್ಚೆಯಾಗ್ತಿದೆ. ಹುಲಿ ಮತ್ತು ಪುಟ್ಟ ಕರುವಿನ ಸ್ಟೋರಿಯನ್ನ, ಪುಣ್ಯಕೋಟಿ ಕಥೆಗೆ ಹೋಲಿಕೆ ಮಾಡಲಾಗ್ತಿದೆ. ನಾವು ಚಿಕ್ಕವರಿದ್ದಾಗ ಪುಣ್ಯ ಕೋಟಿ ಕಥೆಯನ್ನು ಕೇಳಿದ್ದೆವು. ಆದ್ರೀಗ ನಿಜವಾಗಿಯೂ ನೋಡ್ತಿದ್ದೇವೆ ಅಂತಾ ಕಾಮೆಂಟ್‌ ಮಾಡಿದ್ದಾರೆ. ಇನ್ನೂ, ಕೆಲವರು ಬೋನಿನಲ್ಲಿ ಕರುವನ್ನು ಕಟ್ಟಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರು ಕಟ್ಟಿದ ವ್ಯಕ್ತಿಯನ್ನೇ ಬೋನಿನಲ್ಲಿ ಕೂಡಿ ಹಾಕಬೇಕಿತ್ತು ಅಂತಾ, ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest Posts

Don't Miss