Tuesday, September 23, 2025

Latest Posts

3 ಮಕ್ಕಳಿಗೆ ಜನ್ಮ ಕೊಟ್ಟ ಹಾಸನದ ಮಹಾತಾಯಿ

- Advertisement -

1 ಹೆರಿಗೆಯಲ್ಲಿ 1 ಮಗು ಅಥವಾ ಟ್ವಿನ್ಸ್‌ ಇರೋದು ಸಾಮಾನ್ಯ. ಆದ್ರೆ ಹಾಸನ ಜಿಲ್ಲೆಯಲ್ಲಿ 3 ಮಕ್ಕಳಿಗೆ, ಮಹಿಳೆಯೊಬ್ರು ಜನ್ಮ ನೀಡಿದ್ದಾರೆ. ಹಾಸನ ಜಿಲ್ಲೆಯ ಹೊಳೆನಸರಸೀಪುರ ತಾಲೂಕಿನ ದೊಡ್ಡಕಾಡನೂರು ನಿವಾಸಿಯಾಗಿರುವ ಮಹಿಳೆ, ನಗರದ ಹಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ರು.

ಹಿಮ್ಸ್‌ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದಾಗ, ಮಹಿಳೆಯ ಹೊಟ್ಟೆಯಲ್ಲಿ 3 ಮಕ್ಕಳು ಇದ್ದದ್ದು ಗೊತ್ತಾಗಿದೆ. ಸ್ತ್ರೀರೋಗ ತಜ್ಞೆ ಡಾ. ನ್ಯಾನ್ಸಿ ಪಾಲ್‌ ಮಾರ್ಗದರ್ಶನದಲ್ಲಿ, ಗರ್ಭಿಣಿಗೆ ಆರೈಕೆ ಮಾಡಲಾಗಿದೆ. ಸೆಪ್ಟೆಂಬರ್‌ 18ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬೆಳಗ್ಗೆ 11 ಗಂಟೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ.

ಮಹಿಳೆ 3 ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಮೊದಲು ಗಂಡು ಮಗು ಹುಟ್ಟಿದ್ದು, 2.1 ಕೆಜಿ ತೂಕವಿದೆ. ಎರಡನೇ ಹೆಣ್ಣು ಮಗು 1.9 ಕೆ.ಜಿ. ತೂಕವಿದೆ. 3ನೇ ಹೆಣ್ಣು ಮಗು 1.8 ಕೆ.ಜಿ ತೂಕವಿದೆ. ಎರಡು ಹೆಣ್ಣು ಮಗು, ಒಂದು ಗಂಡು ಮಗು ಹುಟ್ಟಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ

- Advertisement -

Latest Posts

Don't Miss