Tuesday, September 23, 2025

Latest Posts

ಅಬ್ಬರಿಸಲು ಸಜ್ಜಾದ ಕಾಂತಾರ : ಟ್ರೈಲರ್‌ ರಿಲೀಸ್‌ಗೆ ಡೇಟ್‌ಫಿಕ್ಸ್!

- Advertisement -

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ – ಚಾಪ್ಟರ್ 1 ಚಿತ್ರ ಬಿಡುಗಡೆಯಿಗೆ ಇನ್ನೇನು ಕೆಲವೇ ದಿನಗಳು ಬಾಕಿ. ಆದರೆ, ಸಿನಿಮಾದ ಪ್ರಚಾರ ಕಾರ್ಯ ಹೆಚ್ಚು ಚುರುಕುಗೊಂಡಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು. ಟ್ರೈಲರ್‌ ಇನ್ನೂ ಬಿಡುಗಡೆ ಆಗಿಲ್ಲ, ಯಾವುದೇ ಸುದ್ದಿಗೋಷ್ಠಿ ಅಥವಾ ಪ್ರೀ-ರಿಲೀಸ್ ಕಾರ್ಯಕ್ರಮ ಘೋಷಣೆ ಆಗಿಲ್ಲ, ಹಾಡುಗಳು ಕೂಡ ಹೊರಬಂದಿಲ್ಲ ಎಂಬ ಅಭಿಮಾನಿಗಳ ಅಸಮಾಧಾನ ವ್ಯಕ್ತವಾಗಿತ್ತು.

ಇದೀಗ, ಹೊಂಬಾಳೆ ಫಿಲ್ಮ್ಸ್ ಟ್ರೈಲರ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ತಿಂಗಳ 22ನೇ ತಾರೀಖು ಮಧ್ಯಾಹ್ನ 12:45ಕ್ಕೆ, ಹೊಂಬಾಳೆಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್‌ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಸೇರಿ ಆರು ಭಾಷೆಗಳಲ್ಲಿ ಟ್ರೈಲರ್ ವೀಕ್ಷಣೆಗೆ ಲಭ್ಯವಾಗಲಿದೆ.

ಇದರ ಮುಂಚೆ, ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಸೆಟ್‌ಗಳ ವೈಭವ, ಕಲಾವಿದರು-ತಂತ್ರಜ್ಞರ ಶ್ರಮ ಹಾಗೂ ಚಿತ್ರದ ಭವ್ಯತೆಯನ್ನು ತೋರಿಸಲಾಗಿತ್ತು. ಆ ವಿಡಿಯೋ ವೈರಲ್ ಆಗಿ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈಗ ಟ್ರೈಲರ್ ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ರಿಷಬ್ ಶೆಟ್ಟಿ ಈ ಚಿತ್ರವನ್ನು ಎರಡು ವರ್ಷಗಳ ಕಾಲ ಗುಪ್ತವಾಗಿಯೇ ಚಿತ್ರೀಕರಿಸಿದ್ದರು. ಇದುವರೆಗೆ ಕೇವಲ ಎರಡು ಪೋಸ್ಟರ್ ಹಾಗೂ ಒಂದು ಮೇಕಿಂಗ್ ವಿಡಿಯೋ ಹೊರಬಂದಿದ್ದು, ಪ್ರೇಕ್ಷಕರು ಟ್ರೈಲರ್ ಮೂಲಕ ಮೊದಲ ಬಾರಿಗೆ ಚಿತ್ರದ ನಿಜವಾದ ದರ್ಶನ ಪಡೆಯಲಿದ್ದಾರೆ. ಕೆಜಿಎಫ್ 2 ಟ್ರೈಲರ್ ಪ್ಯಾನ್-ಇಂಡಿಯಾ ಮಟ್ಟದಲ್ಲಿ ದಾಖಲೆಮಟ್ಟದ ವೀಕ್ಷಣೆ ಗಳಿಸಿದ್ದಿತು. ಈಗ ಕಾಂತಾರ – ಚಾಪ್ಟರ್ 1 ಟ್ರೈಲರ್ ಸಹ ಅನೇಕ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆಯುವ ನಿರೀಕ್ಷೆಯಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss