Tuesday, September 23, 2025

Latest Posts

ಭಾರತದಲ್ಲಿ ಸೆ.19ರಿಂದ iPhone 17 ಮಾರಾಟ ಶುರು – ರಾತ್ರಿಯಿಂದಲೇ ಕ್ಯೂ ನಿಂತ ಜನ!

- Advertisement -

ಐಫೋನ್ ಪ್ರಿಯರಿಗೆ ಇಂದು ಸಂಭ್ರಮದ ದಿನ. ಯಾಕಂದ್ರೆ ಆಪಲ್‌ನ ಇತ್ತೀಚಿನ ಐಫೋನ್ 17 ಸರಣಿಯು ಸೆಪ್ಟೆಂಬರ್ 19 ರಿಂದ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಐಫೋನ್ 17 ಸರಣಿ ಖರೀದಿಗೆ ರಾತ್ರಿಯಿಂದಲೇ ದೆಹಲಿ ಮತ್ತು ಮುಂಬೈನ ಆಪಲ್ ಅಂಗಡಿಗಳ ಹೊರಗೆ ಜನಸಂದಣಿ ಸೇರುತ್ತಿದೆ. ಇತ್ತ ಬೆಂಗಳೂರಿನಲ್ಲೂ ಕ್ಯೂನಲ್ಲಿ ನಿಂತು ಜನರು ಐಫೋನ್ ಖರೀದಿಗೆ ಮುಗಿಬಿದ್ದಿದ್ದಾರೆ.

ಈ ಹೊಸ ಆಪಲ್ ಸರಣಿಯು ನಾಲ್ಕು ಮಾದರಿಗಳನ್ನು ಒಳಗೊಂಡಿದೆ. ಐಫೋನ್ 17, ಐಫೋನ್ 17 ಏರ್, ಐಫೋನ್ 17 ಪ್ರೊ ಮತ್ತು ಐಫೋನ್ 17 ಏರ್, ಎಲ್ಲವೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿವೆ. ಆಕ್ಸಿಸ್ ಬ್ಯಾಂಕ್ ಅಥವಾ ICICI ಬ್ಯಾಂಕ್ ಕಾರ್ಡ್‌ಗಳೊಂದಿಗೆ ಪಾವತಿಸುವ ಮೂಲಕ ಐಫೋನ್ 17 ಸರಣಿಯನ್ನು ಖರೀದಿಸುವಾಗ ₹5,000 ಉಳಿಸಬಹುದು.

ಭಾರತದಲ್ಲಿ ಐಫೋನ್ 17 ಬೆಲೆ ಎಷ್ಟು ಅನ್ನೋದನ್ನ ನೋಡೋದಾದ್ರೆ
ಐಫೋನ್ 17 ರ 256GB ರೂಪಾಂತರದ ಬೆಲೆ ₹82,900 ಮತ್ತು 512GB ರೂಪಾಂತರದ ಬೆಲೆ ₹102,900. ಐಫೋನ್ 17 ಏರ್ ಬೆಲೆ – ಅತ್ಯಂತ ತೆಳುವಾದ ಆಪಲ್ ಫೋನ್‌ನ 256GB ರೂಪಾಂತರ ₹119,900 ಗೆ, 512GB ರೂಪಾಂತರ ₹139,900 ಗೆ ಮತ್ತು 1TB ರೂಪಾಂತರವು ₹159,900 ಗೆ ಲಭ್ಯವಿರುತ್ತದೆ.

ಭಾರತದಲ್ಲಿ ಐಫೋನ್ 17 ಪ್ರೊ ಬೆಲೆ ಮೂರು ರೂಪಾಂತರಗಳಲ್ಲಿ ಬರುತ್ತದೆ. 256 GB, 512 GB ಮತ್ತು 1 TB. 256 GB ರೂಪಾಂತರದ ಬೆಲೆ ₹1,34,900, 512 GB ರೂಪಾಂತರದ ಬೆಲೆ ₹1,54,900 ಮತ್ತು ಟಾಪ್ 1 TB ರೂಪಾಂತರದ ಬೆಲೆ ₹1,74,900.

ಐಫೋನ್ 17 ಪ್ರೊ ಮ್ಯಾಕ್ಸ್‌ನ 256 ಜಿಬಿ ರೂಪಾಂತರದ ಬೆಲೆ ₹1,49,900, 512 ಜಿಬಿ ರೂಪಾಂತರದ ಬೆಲೆ ₹1,69,900, 1 ಟಿಬಿ ರೂಪಾಂತರದ ಬೆಲೆ ₹1,89,900 ಮತ್ತು 2 ಟಿಬಿ ರೂಪಾಂತರದ ಬೆಲೆ ₹2,29,900. ಒಟ್ಟಾರೆಯಾಗಿ, ಭಾರತದಲ್ಲಿ ಐಫೋನ್ ಬೆಲೆ ಯುಎಸ್‌ಗಿಂತ ಸರಿಸುಮಾರು ₹38,000 ಹೆಚ್ಚಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss