ಎಲ್ಲರಿಗು ಗೊತ್ತಿರೋಹಾಗೆ ಕಿಚ್ಚ ಸುದೀಪ್ ಅವರ ತಾಯಿ ಹಲವು ತಿಂಗಳುಗಳ ಹಿಂದೆ ನಿಧನರಾಗಿದ್ದರು. ಕಿಚ್ಚ ಕೂಡ ದುಃಖದಲ್ಲಿದ್ರು. ಆದ್ರೆ ಈಗ ಬಾದ್ ಷಾ ಕಿಚ್ಚಾ ಸುದೀಪ್ ಸದ್ಯ ಬಿಗ್ ಬಾಸ್ ಸೀಸನ್ ೧೨ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿ ಕಿಚ್ಚನಿಗೋಸ್ಕರ ಒಂದು ಚಿತ್ರವನ್ನ ಬಿಡಿಸಿ ಗಿಫ್ಟ್ ನೀಡಿದ್ದಾರೆ. ಆ ಚಿತ್ರವನ್ನ ನೋಡಿ ಸುದೀಪ್ ಅವ್ರು ಫುಲ್ ಖುಷಿಯಾಗಿದ್ದಾರೆ. ಹೌದು ಅಭಿಮಾನಿಯೊಬ್ಬರು ಸುದೀಪ್ ಅವರು ತಮ್ಮ ತಾಯಿಯ ಮಡಿಲಿನಲ್ಲಿ ಮಲಗಿರುವ ಹಾಗೆ ಚಿತ್ರವನ್ನ ಬಿಡಿಸಿ ಸುದೀಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಅವರು ಫೋಟೋವನ್ನ ತೆಗೆದುಕೊಳ್ಳೋವಾಗ ತಾವು ಹಾಕಿರುವಂತಹ ಚಪ್ಪಲಿಯನ್ನ ತೆಗೆದು ವಿನಯಪೂರ್ವಕವಾಗಿ ಫೋಟೋವನ್ನ ತೆಗೆದುಕೊಂಡಿದ್ದಾರೆ. ಸದ್ಯ ಕಿಚ್ಚನ ಕೈಯಲ್ಲಿರುವ ಈ ಚಿತ್ರಕ್ಕೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿ : ಲಾವಣ್ಯ ಅನಿಗೋಳ