ಮಲಯಾಳಂ ಸಿನಿಮಾ ಮತ್ತು ನಾಟಕ ರಂಗದ ದಂತಕಥೆಯ ನಟ ಮೋಹನ್ ಲಾಲ್ರನ್ನು 2023ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆ ಈ ಘೋಷಣೆ ಮಾಡಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರವು ಮೋಹನ್ ಲಾಲ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಮೋಹನ್ ಲಾಲ್ ಅವರ ಸಿನಿಮಾ ಮತ್ತು ಕಲಾತ್ಮಕ ಪ್ರವಾಸವು ಹೊಸ ತಲೆಮಾರಿಗೆ ಪ್ರೇರಣೆಯಾಗಿದ್ದು, ಭಾರತೀಯ ಸಿನೆಮಾ ರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಅವರ ಕೊಡುಗೆಗೆ ಗೌರವ ನೀಡಲಾಗುತ್ತಿದೆ. ಅವರ ಅಸಾಧಾರಣ ಪ್ರತಿಭೆ ಮತ್ತು ಕಠಿಣ ಪರಿಶ್ರಮ ಭಾರತೀಯ ಸಿನೆಮಾ ಇತಿಹಾಸದಲ್ಲಿ “ಗೋಲ್ಡನ್ ಸ್ಟಾಂಡರ್ಡ್” ಎಂಬ ಸ್ಥಾನ ಪಡೆಯಿದೆ.
ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ತಿಳಿಸಿದಂತೆ, 23 ಸೆಪ್ಟೆಂಬರ್ 2025 ರಂದು ನಡೆಯುವ 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಮೋಹನ್ ಲಾಲ್ಗಳಿಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿತವಾಗಿರುವುದಕ್ಕೆ ಪ್ರಧಾನಿ ನರೆಂದ್ರ ಮೋದಿ ಅವರು ಅಭಿನಂದನೆ ಸೂಚಿಸಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು , ಮೋಹನ್ ಲಾಲ್ ಅವರ ಕೆಲಸಗಳು ಮುಂದಿನ ತಲೆಮಾರಿಗೂ ಸ್ಪೂರ್ತಿ ನೀಡುತ್ತವೆ. ಅವರು ಮಲಯಾಳಂ ಸಿನಿಮಾ, ನಾಟಕ ಮತ್ತು ಸಂಸ್ಕೃತಿಯ ಬೆಳಕಾಗಿದ್ದು, ಹಿಂದಿ, ತೆಲುಗು ಮತ್ತು ಕನ್ನಡ ಸಿನೆಮಾ ರಂಗದಲ್ಲಿ ಸಹ ಅಸಾಧಾರಣ ಸಾಧನೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ