ಸರಿಗಮಪ ಕನ್ನಡ ಸೀಸನ್ 13ರ ಸ್ಪರ್ಧಿ ಮತ್ತು ಭಕ್ತಿಗೀತೆಗಳಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಸುಹಾನಾ ಸೈಯದ್ ತಮ್ಮ ಪ್ರೀತಿ ಜೀವನವನ್ನು ಬಹಿರಂಗಪಡಿಸಿದ್ದಾರೆ. ಹಿಂದಿನ ಬಾರಿ ಭಕ್ತಿಗೀತೆ ಹಾಡಿ ವಿವಾದದಲ್ಲಿ ಸಿಕ್ಕಿದ್ದರು. ಇದೀಗ ಶಿವಮೊಗ್ಗ ಮೂಲದ ನಟ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರೊಂದಿಗೆ ಸುಹಾನಾ ಸಂಬಂಧ ಹೊಂದಿರುವುದಾಗಿ ತಮ್ಮ ಫೋಟೋ ಮತ್ತು ಹೃದಯಸ್ಪರ್ಶಿ ಮಾತುಗಳೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರಕಟಣೆ ಮಾಡಿದ್ದಾರೆ.
ಸುಹಾನಾ ತಮ್ಮ ಪೋಸ್ಟಿನಲ್ಲಿ ಪ್ರತಿ ಜೀವಿಯ ನಿರೀಕ್ಷೆ ಮತ್ತು ಅನ್ವೇಷಣೆ ಪ್ರೇಮಕ್ಕೆ ಸಿಗುತ್ತದೆ. ಪ್ರೇಮಕ್ಕೆ ಯಾವ ಮಿತಿ ಇಲ್ಲ. ಇದು ಅನಂತದ ಪ್ರಯಾಣ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಸಂಶಯ, ಮತ್ತು ಭಯದ ನಡುವೆಯೂ ಪ್ರೀತಿ ನಮ್ಮನ್ನು ಹಿಡಿದಿಟ್ಟಿದೆ ಎಂಬ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಸುಹಾನಾ ಮತ್ತು ನಿತಿನ್ ಜೋಡಿಯನ್ನ ನೆಟ್ಟಿಗರು ಸ್ವೀಕರಿಸಿಕೊಂಡಿದ್ದಾರೆ. ನಟಿ ಅನು ಪ್ರಭಾಕರ್ ಸೇರಿದಂತೆ ಹಲವರು ಜೋಡಿಗೆ ಶುಭಾಶಯ ಕೋರಿದ್ದಾರೆ. ‘ಸರಿಗಮಪ’ ಶೋನಲ್ಲಿ ಸುಹಾನಾ ಹಾಡಿದ್ದ ‘ಶ್ರೀಕಾರನೇ’ ಮತ್ತು ‘ಮುಕುಂದ ಮುರಾರಿ’ ಹಾಡುಗಳು ಪ್ರೇಕ್ಷಕರ ಗಮನ ಸೆಳೆದವುದಿದ್ದವು.
ಹಿಂದಿನ ವಿವಾದಗಳನ್ನು ಸ್ಮರಿಸಿದ್ದಾರೆ. ಸುಹಾನಾ ನನ್ನನ್ನು ಗಾಯಕಿಯಾಗಿ, ಭಾರತೀಯಳಾಗಿ ಮತ್ತು ಮನುಷ್ಯಳಾಗಿ ನೋಡಿ. ನನ್ನ ಕೆಲಸ ಹಾಡುವುದು, ನಾನು ಕೊನೆಯ ಉಸಿರು ಇರುವವರೆಗೆ ಹಾಡುತ್ತೇನೆ ಎಂದು ಮನವಿ ಮಾಡಿದ್ದಾರೆ. ಅವರು ತಮ್ಮ ಈ ಹೆಜ್ಜೆಗೆ ಕುಟುಂಬದಿಂದ ಮೆಚ್ಚುಗೆ ಸಿಕ್ಕಿರುವುದನ್ನು ಮತ್ತು ಕೆಲವೊಂದು ಟೀಕೆಗಳಿಂದ ನೋವು ಅನುಭವಿಸುತ್ತಿರುವುದನ್ನು ಕೂಡ ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

