ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರಿಗೆ ವಂಚಿಸಲು ಸೈಬರ್ ವಂಚಕರು ಯತ್ನಿಸಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ದೂರಸಂಪರ್ಕ ಸಚಿವಾಲಯದ ಉದ್ಯೋಗಿ ಹೆಸರಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರಿಗೆ ವಂಚಿಸೋ ಯತ್ನ ನಡೆದಿದೆ. ನಿಮ್ಮ ನಂಬರ್ ಆಧಾರ್ಗೆ ಲಿಂಕ್ ಮಾಡದೇ ನೋಂದಾಯಿಸಲಾಗಿದೆ ಅಂತ ಹೇಳಿದ್ದಾರೆ.
ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಿದ್ದಾರಂತೆ. ನಿಮ್ಮ ನಂಬರ್ನಿಂದ ಅಶ್ಲೀಲ ವಿಡಿಯೋ ಕಳಿಸಲಾಗ್ತಿದೆ ಅಂತ ಬೆದರಿಕೆ ಹಾಕಿದ್ದಾನಂತೆ. ಬಳಿಕ ಸುಧಾಮೂರ್ತಿಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ದೂರಸಂಪರ್ಕ ಸಚಿವಾಲಯದ ಉದ್ಯೋಗಿ ಹೆಸರಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರಿಗೆ ವಂಚಿಸೋ ಯತ್ನ ನಡೆದಿತ್ತು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಇದೇ ಸೆಪ್ಟೆಂಬರ್ 5ರಂದು ಕರೆ ಮಾಡಿದ್ದ ವಂಚಕರು, ಸುಧಾಮೂರ್ತಿಯವರಿಗೆ ವಂಚಿಸಲು ಯತ್ನಿಸಿದ್ದರು ಎನ್ನಲಾಗಿದೆ. ದೂರ ಸಂಪರ್ಕ ಸಚಿವಾಲಯದ ಉದ್ಯೋಗಿ ಅಂತ ವಂಚನೆಗೆ ಯತ್ನಿಸಿದ್ದಾರೆ. ಸೆಪ್ಟೆಂಬರ್ 5ರಂದು ಕರೆ ಮಾಡಿ ಸೈಬರ್ ವಂಚಕರು ವಂಚನೆಗೆ ಯತ್ನಿಸಿದ್ದರು.
ವರದಿ : ಲಾವಣ್ಯ ಅನಿಗೋಳ