ಬೆಂಗಳೂರಿನ RT ನಗರದಲ್ಲಿ ನಿಜವಾದ Animal Lover!

ನಾಯಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಜನರೂ ಸಾಕಷ್ಟಿದ್ದಾರೆ. ಮನುಷ್ಯರು ಮತ್ತು ನಾಯಿಗಳ ನಡುವಿನ ಸ್ನೇಹದ ಅನೇಕ ವಿಡಿಯೋಗಳು ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಡಿಯೋ ಈಗ ಜನರ ಗಮನ ಸೆಳೆಯುತ್ತಿದೆ. ಈ ವಿಡಿಯೋವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

ಮಹಿಳೆ 28 ಗೋಲ್ಡನ್ ರಿಟ್ರೀವರ್‌ಗಳೊಂದಿಗೆ ನಗರದಲ್ಲಿ ಕಾಣಿಸಿಕೊಂಡಿದ್ದಾರೆ. 28 ನಾಯಿಗಳು, 1 ವಿಶಾಲ ಹೃದಯ, ಬೆಂಗಳೂರಿನ ಆರ್‌ಟಿ ನಗರದ ಶ್ವಾನಪ್ರೇಮಿ ಆಂಟಿಯನ್ನು ಭೇಟಿಯಾಗಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

‘ಬೆಂಗಳೂರಿನ ಆರ್‌ಟಿ ನಗರದಲ್ಲಿ 28 ಗೋಲ್ಡನ್ ರಿಟ್ರೀವರ್‌ಗಳೊಂದಿಗೆ ನಡೆಯುತ್ತಿರುವ ಈ ಮಹಿಳೆಯನ್ನು ನಾವು ನೋಡಿದ್ದೇವೆ, ಎಲ್ಲಾ ನಾಯಿಗಳು ಒಂದೇ ರೀತಿ ಇವೆ, ಎಲ್ಲವೂ ಸಂತೋಷವಾಗಿವೆ. ಆ ಮಹಿಳೆಯೂ ತುಂಬಾ ಶಾಂತವಾಗಿದ್ದಾರೆ, ತಮ್ಮ ಈ ಪ್ರಾಣಿ ಕುಟುಂಬದೊಂದಿಗೆ ನಗುತ್ತಿದ್ದಾರೆ.

ಇಲ್ಲಿ ಎಲ್ಲ ನಾಯಿಗಳು ಶಾಂತವಾಗಿದ್ದು, ಯಾವುದೂ ಕಚ್ಚಾಡುತ್ತಿಲ್ಲ. ಇಂದಿನ ದಿನಗಳಲ್ಲಿ ಜೀವನದಲ್ಲಿ ನಿಷ್ಠಾವಂತ ಸ್ನೇಹಿತರು ವಿರಳ, ಆದರೆ ಪ್ರೀತಿ ಮತ್ತು ನಿಷ್ಠೆ ಕೆಲವೊಮ್ಮೆ ಈ ಪ್ರಾಣಿಗಳ ಮೂಲಕವೂ ಬರಬಹುದು’ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author