ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಎಲ್ಲಿ ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ ಕೂಡ ಇಲ್ಲ. ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಪೊಲೀಸ್ ಜೀಪ್ ಮೇಲೇರಿ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ರಾಜಸ್ಥಾನದ ಕೋಟಾದಲ್ಲಿ ಪ್ರೇಮಿಗಳಿಬ್ಬರೂ ಓಡಿ ಹೋಗಿ ಸಿಕ್ಕಿ ಹಾಕಿಕೊಂಡು ಪೊಲೀಸ್ ಜೀಪ್ ಮೇಲೇರಿ ರಂಪಾಟ ಮಾಡಿದ್ದಾರೆ. 22 ವರ್ಷದ ಆ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ವರದಿಯಾಗಿದೆ. ಪ್ರೇಮಿಗಳಿಬ್ಬರ ಹೈ ಡ್ರಾಮಾವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ನಂತರದಲ್ಲಿ ಪೊಲೀಸರು ಇಬ್ಬರನ್ನ ಕೆಳಗಿಳಿಸಿ ಯುವಕನನ್ನು ಬಂಧಿಸಿದರು. ಪೊಲೀಸ್ ವಾಹನದ ಮೇಲೆ ಹತ್ತಿ ಅವ್ಯವಸ್ಥೆ ಸೃಷ್ಟಿಸಿದ್ದಕ್ಕಾಗಿ 22 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗಿ ಅಪ್ರಾಪ್ತ ವಯಸ್ಕಳು ಎಂದು ವರದಿಯಾಗಿದೆ.
ವರದಿ : ಲಾವಣ್ಯ ಅನಿಗೋಳ