Tuesday, September 23, 2025

Latest Posts

ಜಾತಿಗಣತಿಗೆ ನೂರೆಂಟು ವಿಘ್ನ

- Advertisement -

ರಾಜ್ಯದ್ಯಂತ ಸೆಪ್ಟೆಂಬರ್‌ 22ರಿಂದ ಜಾತಿಗಣತಿ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ ಹಾಗೂ ಕಿಟ್‌ಗಳ ಕೊರತೆ ಎದುರಾಗಿದೆ. ಗಣತಿದಾರರು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವುದು ಮತ್ತು ವಿವರಗಳನ್ನು ತೆಗೆದುಕೊಳ್ಳುವ ಬಗ್ಗೆ ಗೊಂದಲಕ್ಕೀಡಾಗಿದ್ರು.

ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಕೊಡಗು ಜಿಲ್ಲೆಗಳು ಸೇರಿ ಹಲವು ಜಿಲ್ಲೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಬಿಇಒ ಕಚೇರಿ ಬಳಿ ಬಂದ್ರೂ ಸಮಯಕ್ಕೆ ಸರಿಯಾಗಿ ಕಿಟ್‌ ಸಿಕ್ಕಿಲ್ಲ. ಸಂಪೂರ್ಣವಾಗಿ ತರಬೇತಿಯನ್ನೂ ಕೊಟ್ಟಿಲ್ಲ. ಮೊಬೈಲ್‌ ಆಪ್‌ ಸರಿಯಾಗಿ ಓಪನ್‌ ಆಗ್ತಿಲ್ಲ. ಎಲ್ಲಿ ಹೋಗಿ ಸರ್ವೇ ಮಾಡಬೇಕೆಂಬ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಅಂತಾ ಶಿಕ್ಷಕರು ಆರೋಪಿಸುತ್ತಿದ್ದಾರೆ.

ಇನ್ನು, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರಂಭದಲ್ಲಿ ಸಣ್ಣಪುಟ್ಟ ಸಮಸ್ಯೆ ಇರುತ್ತದೆ. ಕೆಲವು ಗಣತಿದಾರರಿಗೆ ಅಪ್ಲಿಕೇಶನ್‌ ಬಗ್ಗೆ ತಿಳಿಯುವಲ್ಲಿ ಹಾಗೂ ಬಳಕೆ ಮಾಡುವಲ್ಲಿ ಸಮಸ್ಯೆಯಾಗಿದೆ. ಗೊಂದಲಗಳ ನಿವಾರಣೆಗೆ ಸ್ವಲ್ಪ ಸಮಯ ಬೇಕಾಗಲಿದೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ, 1.75 ಲಕ್ಷ ಗಣತಿದಾರರು, ಹೆಚ್ಚಾಗಿ ಸರ್ಕಾರಿ ಶಾಲಾ ಶಿಕ್ಷಕರು ಭಾಗಿಯಾಗಿದ್ರು. ರಾಜ್ಯಾದ್ಯಂತ ಸುಮಾರು 2 ಕೋಟಿ ಮನೆಗಳಲ್ಲಿ, ಸುಮಾರು 7 ಕೋಟಿ ಜನರ ದತ್ತಾಂಶ ಸಂಗ್ರಹಿಸಲಿದ್ದಾರೆ. ಬೆಂಗಳೂರು ಭಾಗದಲ್ಲಿ ತರಬೇತಿ, ಅಗತ್ಯ ಸಿದ್ಧತೆಗಳಿಂದಾಗಿ, ಒಂದೆರೆಡು ವಾರ ವಿಳಂಬವಾಗುವ ಸಾಧ್ಯತೆ ಇದೆ. ಒಟ್ನಲ್ಲಿ ಜಾತಿಗಣತಿಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿದೆ.

- Advertisement -

Latest Posts

Don't Miss