ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಜಾತಿ ತಾರತಮ್ಯ ನುಸುಳಿದೆ. ದಲಿತ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು, ಚೇರ್ – ಟೇಬಲ್ ಕೊಡದೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಮೇಲಾಧಿಕಾರಿಯ ಕಿರುಕುಳಕ್ಕೆ ಬೇಸತ್ತು, ಅಧಿಕಾರಿಯೊಬ್ಬರು ನೆಲದ ಮೇಲೆ ಗೋಣಿ ಚೀಲ ಹಾಸಿಕೊಂಡು ಕುಳಿತು ಕೆಲಸ ಮಾಡುತ್ತಿದ್ದಾರೆ.
ಹಣಕಾಸು ವಿಭಾಗದ ಆಡಳಿತ ಅಧೀಕ್ಷಕ ವಿನಯ್‌ಗೆ, ಆಡಳಿತ ವಿಭಾಗದ ಎಂಡಿ ಮಂಜುನಾಥ್ ನಾಯ್ಕ್ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ಬೇಸತ್ತ ವಿನಯ್, ಕಳೆದ 3 ದಿನದಿಂದ ನೆಲದ ಮೇಲೆ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದಾರೆ. ಕಳೆದ 1 ತಿಂಗಳ ಹಿಂದಷ್ಟೇ ಆಡಳಿತ ವಿಭಾಗದಿಂದ ಹಣಕಾಸು ವಿಭಾಗಕ್ಕೆ ವಿನಯ್ ವರ್ಗಾವಣೆಗೊಂಡಿದ್ರು. ಈಗ ಸ್ಥಳ ಕೊಡದೇ ಅವಮಾನ ಮಾಡಿರುವುದಾಗಿ ಆರೋಪಿಸಿದ್ದಾರೆ.
ಕಚೇರಿ ಮೂಲೆಯಲ್ಲಿ ಕಂಪ್ಯೂಟರ್, ಫೈಲ್ಸ್ ತುಂಬಿದ್ದ ಚೇಂಬರ್‌ನಲ್ಲಿ, ಕೆಲಸ ಮಾಡಲು ಹಣಕಾಸು ವಿಭಾಗದ ವ್ಯವಸ್ಥಾಪಕರು ಹೇಳಿದ್ರಂತೆ. ಹೀಗಾಗಿ ಅಲ್ಲೇ ಸ್ವಚ್ಚಗೊಳಿಸಿಕೊಂಡು ವಿನಯ್ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆಡಳಿತ ಅಧೀಕ್ಷಕ ವಿನಯ್ ಪ್ರತಿಕ್ರಿಯೆ ನೀಡಿದ್ದು, ಅವ್ಯವಹಾರಗಳಿಗೆ ಕೈ ಜೋಡಿಸಿಲ್ಲ ಅಂತಾ ಹೀಗೆಲ್ಲಾ ಮಾಡ್ತಿದ್ದಾರೆಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 20ರಿಂದ ಚೇರ್, ಟೇಬಲ್ ಕೊಟ್ಟಿಲ್ಲ. ಕೆಲ ದಿನಗಳ ಹಿಂದೆ ಪ್ರಭಾರಿ ವ್ಯವಸ್ಥಾಪಕ ಮಂಜುನಾಥ್ ನಾಯ್ಕ್ ಬಂದಿದ್ರು. ವಿನಯ್‌ಗೆ ಏಕೆ ಪ್ರತ್ಯೇಕ ಚೇಂಬರ್ ನೀಡಿದ್ದೀರಾ?. ಚೇಂಬರ್ ತೆರವುಗೊಳಿಸಿ. ಡಸ್ಟ್ ಇರುವ ಕಡೆ ಆತನನ್ನ ಹಾಕಿ ಅಂತಾ ಅಂತಾ ಮ್ಯಾನೇಜರ್‌ಗೆ ಸೂಚಿಸಿದ್ರಂತೆ. ಈ ಬಗ್ಗೆ ಸ್ವತಃ ಮ್ಯಾನೇಜರ್ ನನಗೆ ಹೇಳಿದ್ದಾರೆ. ವೆರಿಫೈ ಕೆಲಸ ಕೊಟ್ಟಿದ್ದೀರಾ?. ಕೇಸ್ ವರ್ಕರ್ ಕೆಲಸ ಕೊಡಿ ಅಂತಾ ಧಮ್ಕಿ ಹಾಕಿದ್ದಾರೆ. ನೀನೊಮ್ಮೆ ಅವರ ಬಳಿ ಹೋಗಿ ಮಾತನಾಡಿ ಅಂತಾ ಹೇಳಿದ್ರು. ಬಳಿಕ ನಾನು ಎಂಡಿ ಚೇಂಬರ್ ಬಳಿ ಕಾದರೂ ಭೇಟಿ ಮಾಡಲಿಲ್ಲ. ಚೇಂಬರ್‌ನಿಂದ ಹೊರಗೆ ಬಂದಾಗ ಪ್ರಶ್ನಿಸಿದ್ದೆ. ಇದಕ್ಕೆ ಮಂಜುನಾಥ್ ನಾಯ್ಕ್ ಮ್ಯಾನೇಜರ್ ಬಳಿ ಕೇಳು. ಅವರಿಗೆ ಹೇಳಿದ್ದೇನೆ ಅಂತಾ ಹೇಳಿದ್ರು.
ಆಡಳಿತ ವಿಭಾಗ ಮತ್ತು ಎಫ್ ಅಂಡ್ ಎಫ್‌ಗೆ ಕಳಿಸುವ ಫೈಲ್‌ಗಳಲ್ಲಿ ಲೋಪದೋಷಗಳಿಂದ ಕೂಡಿರುತ್ತಿದ್ದವು. ನಾನು ಅದಕ್ಕೆಲ್ಲಾ ಅಬ್ಚಕ್ಷನ್ಸ್ ಬರೀತಿದ್ದೆ. ಕೊರ್ಯಿ ಮಾಡೋದನ್ನ ತಪ್ಪಾಗಿ ಅರ್ಥೈಸಿಕೊಂಡು ಟಾರ್ಗೆಟ್ ಮಾಡ್ತಿದ್ದಾರೆ. ಹಲವು ಫೈಲ್‌ಗಳನ್ನು ಕ್ಲಾರಿಫಿಕೇಷನ್‌ಗೆ ವಾಪಸ್ ಕಳಿಸಿ ಕೊಟ್ಟಿದ್ದೆ. ಅವರು ಹೇಳಿದಂತೆ ಕೇಳ್ತಿಲ್ಲ. ಈ ಹಿಂದೆ ಮಂಜುನಾಥ್ ನಾಯ್ಕ್ ಶಿಷ್ಯ ಉಮೇಶ್ ಎಸ್. ಎಂಬಾತ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದ. ಈ ಬಗ್ಗೆ ಎಂಡಿ ಮತ್ತು ನಿರ್ದೇಶಕರಿಗೆಲ್ಲಾ ತಿಳಿಸಿರುವುದಾಗಿ ವಿನಯ್ ಹೇಳಿದ್ದಾರೆ. ನನ್ನನ್ನ ಒಳಗೆ ಬಿಟ್ಟು ಕೊಳ್ಳುತ್ತಿಲ್ಲ. ನಮ್ಮ ಅಂಡರ್‌ನಲ್ಲಿ ಬರೋರಿಗೆಲ್ಲಾ ಚೇಂಬರ್ ಇದೆ. ತಾನು ದಲಿತ ಎಂಬ ಕಾರಣಕ್ಕೆ ಕಿರುಕುಳ ನೀಡ್ತಿದ್ದಾರೆಂಬ ಆರೋಪಿಸಿದ್ದಾರೆ.