ಟಾಲಿವುಡ್ ಸ್ಟಾರ್ ಹೀರೋ ಪವನ್ ಕಲ್ಯಾಣ್ ನಟಿಸಿರುವ ‘ಓಜಿ’ ಸಿನಿಮಾ ಸೆಪ್ಟೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಸಖತ್ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಕನ್ನಡದ ನಟ ಸೌರವ್ ಲೋಕೇಶ್ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದು, ಪವನ್ ಕಲ್ಯಾಣ್ ಎದುರು ಅಬ್ಬರಿಸಿದ್ದಾರೆ.
ಟಾಲಿವುಡ್ನಲ್ಲಿ ಸೌರವ್ ಲೋಕೇಶ್ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾದಲ್ಲಿ ಕೂಡ ಸೌರವ್ ಲೋಕೇಶ್ ಅವರು ಅಭಿನಯಿಸುತ್ತಿದ್ದಾರೆ. ಆ ಸಿನಿಮಾದ ಮೇಲೂ ಅವರಿಗೆ ಹೆಚ್ಚು ಭರವಸೆ ಇದೆ. ಕನ್ನಡದಲ್ಲಿ ಹೊಸ ಸಿನಿಮಾವನ್ನು ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ.
ನಿರ್ದೇಶಕ ಸುಜೀತ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ನನಗೆ ಸಿಗುತ್ತಿದೆ ಎಂದಾಗ ಖುಷಿ ಆಯಿತು. ಕಥೆ ಕೇಳಿದೆ, ಇಂಟರೆಸ್ಟಿಂಗ್ ಆಗಿರುತ್ತದೆ ಎನಿಸಿತು. ಇದು ತುಂಬಾ ದೊಡ್ಡ ಪ್ರಾಜೆಕ್ಟ್ ಆದ್ದರಿಂದ ಅನುಭವ ಚೆನ್ನಾಗಿ ಇರುತ್ತದೆ. ಸುಜೀತ್ ಅವರು ‘ಸಾಹೋ’ ಮಾಡಿದ ನಿರ್ದೇಶಕರು. ಅಂಥವರ ಜೊತೆ ಕಲಿಯುವುದು ತುಂಬಾ ಇರುತ್ತದೆ ಎಂಬ ಕಾರಣಕ್ಕೆ ‘ಓಜಿ’ ಚಿತ್ರವನ್ನು ಒಪ್ಪಿಕೊಂಡೆ’ ಎಂದು ಸೌರವ್ ಲೋಕೇಶ್ ಅವರು ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ