ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು.

2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು, ನಿರ್ದೇಶಕರು ಹಾಗೂ ತಾಂತ್ರಿಕ ಕಲಾವಿದರನ್ನ ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನ ಪ್ರದಾನ ಮಾಡಿದರು. ಈ ವೇಳೆ ಮೊದಲ ಬಾರಿಗೆ ನಟ ಶಾರುಖ್‌ ಖಾನ್‌ ಅವರು ʻಜವಾನ್ʼ ಚಿತ್ರಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ.

ಮನರಂಜನಾ ಉದ್ಯಮದಲ್ಲಿ 33 ವರ್ಷಗಳ ನಂತರ ಶಾರುಖ್‌ ಖಾನ್‌ ಅವರಿಗೆ ಕೊನೆಗೂ ಪ್ರಶಸ್ತಿ ಸಿಕ್ಕಿದ್ದರಿಂದ ಶಾರುಖ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 2023ರ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ ಲಾಲ್‌ ಅವರಿಗೆ ನೀಡಿ ಗೌರವಿಸಲಾಯಿತು.

ಭಗವಂತ್‌ ಕೇಸರಿ ಚಿತ್ರಕ್ಕಾಗಿ ಅತ್ಯುತ್ತಮ ತೆಲುಗು ಚಿತ್ರ ಪ್ರಶಸ್ತಿಯನ್ನ ನಿರ್ಮಾಪಕ ಸಾಹು ಗರಪತಿ ಹಾಗೂ ನಿರ್ದೇಶಕ ಅನಿಲ್‌ ಕುಮಾರ್‌ ರವಿಪುಡಿ ಸ್ವೀಕರಿಸಿದರು. ಮಲಯಾಳಂ ನ ಉಲ್ಲೋಳುಕ್ಕು ಅತ್ಯುತ್ತಮ್ಮ ಚಿತ್ರಕ್ಕಾಗಿ ನಿರ್ದೇಶಕ ಕ್ರಿಸ್ಟೋ ಟೋಮಿ ಮತ್ತು ಚಿತ್ರದ ನಿರ್ಮಾಪಕ ಹನಿ ಟ್ರೆಹಾನ್‌ ಅವರಿಗೆ ಪ್ರಶಸ್ತಿ ನೀಡಿಲಾಯಿತು.

About The Author