Friday, November 14, 2025

Latest Posts

“ಗುಂಡಿ ಮುಚ್ಚಲು ಆಗ್ತಿಲ್ಲ ಸರ್ಕಾರಕ್ಕೆ ನಾಚಿಕೆ ಆಗ್ಬೇಕು”

- Advertisement -

ರಾಜ್ಯದೆಲ್ಲೆಡೆ ರಸ್ತೆ ಗುಂಡಿಗಳ ವಿಚಾರ, ಭಾರೀ ಸದ್ದು ಮಾಡ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟಕ್ಕೆ ಕರೆ ಕೊಡಲಾಗಿದೆ. ಈ ಬಗ್ಗೆ ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಪ್ರತಿಕ್ರಿಯಿಸಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಜನಸಾಮಾನ್ಯರಿಗೆ ಸೂಕ್ತ ರಸ್ತೆ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ‌ಆಗಿಲ್ಲ. ರಸ್ತೆ ಗುಂಡಿ ಮುಚ್ಚಲು ಆಗದ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗ್ಬೇಕೆಂದು ಕಿಡಿಕಾರಿದ್ದಾರೆ. ಇನ್ನು, ಪ್ರಧಾನಿ ಮೋದಿ ಮನೆಯ ರಸ್ತೆ ಎದುರು ಗುಂಡಿಗಳಿವೆ. ನಾನು ದೆಹಲಿಗೆ ಹೋಗಿದ್ದಾಗ ನೋಡಿಕೊಂಡು ಬಂದಿದ್ದೇನೆಂದು ಡಿಕೆಶಿ ಹೇಳಿದ್ರು. ಇದಕ್ಕೆ ಟಾಂಗ್‌ ಕೊಟ್ಟಿರುವ ಸುರೇಶ್‌ ಬಾಬು, ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಬೇರೆಯವರ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಾದ್ಯಂತ ಗುಂಡಿ ಮುಚ್ಚಿ ಅಭಿಯಾನ ಮಾಡ್ತಿದ್ದು, ಈಗಾಗಲೇ ನಾವೆಲ್ಲಾ ಚರ್ಚೆ ಮಾಡಿದ್ದೇವೆ. ಮೊದಲು ಬೆಂಗಳೂರು ನಂತರ ಜಿಲ್ಲಾವಾರು ಗುಂಡಿ ಮುಚ್ಚಿ ಚಳುವಳಿಯನ್ನು ಮಾಡುತ್ತೇವೆ. ತಾಲೂಕು ಮತ್ತು ಗ್ರಾಮೀಣ ಭಾಗದಲ್ಲೂ ಸ್ಥಳೀಯರೊಂದಿಗೆ ಹೋರಾಟ ಮಾಡುತ್ತೇವೆಂದು ಹೇಳಿದ್ದಾರೆ.
ಜನಗಣತಿ ವಿಚಾರದಲ್ಲಿ ಒಂದಷ್ಟು ಗೊಂದಲ ಇದೆ. ಹಲವರು ಈಗಾಗಲೇ ನ್ಯಾಯಾಲಯದ ಮೊರೆ ಕೊಡ ಹೋಗಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಜನಗಣತಿ ಜಾರಿಯಾಗಲಿ ಎಂದಿದ್ದಾರೆ.

- Advertisement -

Latest Posts

Don't Miss