Thursday, September 25, 2025

Latest Posts

ಜಾತಿಗಣತಿ: ಈ ತಿಂಗಳು ಗೃಹಜ್ಯೋತಿಗೆ ಶಾಕ್‌!

- Advertisement -

ರಾಜ್ಯಾದ್ಯಂತ ನಡೆಯುತ್ತಿರುವ ಜಾತಿಗಣತಿ ಹಲವು ಸಮಸ್ಯೆಗಳ ಕೇಂದ್ರಬಿಂದು ಆಗಿದೆ. ಸರ್ವರ್ ಸಮಸ್ಯೆಯಲ್ಲಿ ಫೀಲ್ಡಿಗಿಳಿದ ಶಿಕ್ಷಕರು ಪರದಾಡುತ್ತಿದ್ದಾರೆ. ಜಾತಿಗಣತಿಯ ಟ್ರಬಲ್ ಈಗ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೂ ತಟ್ಟಿದೆ.

ಬೆಸ್ಕಾಂ ಮೀಟರ್ ರೀಡರ್‌ಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸ ನೀಡಲಾಗಿದೆ. ಬೆಸ್ಕಾಂ ಸಿಬ್ಬಂದಿ ಜಾತಿಗಣತಿಯಲ್ಲಿ ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್‌ನಲ್ಲಿ ತಡವಾಗಿ ಮೀಟರ್‌ ರೀಡಿಂಗ್‌ ನಡೆದಿದೆ. ಬಿಲ್‌ನಲ್ಲಿ ವಿದ್ಯುತ್‌ ಬಳಕೆ ಹೆಚ್ಚಾಗಿ ಹಲವು ಗ್ರಾಹಕರಿಗೆ ‘ಗೃಹಜ್ಯೋತಿ’ ಪ್ರಯೋಜನ ಸಿಗದಂತಾಗಿದೆ.

ಪ್ರತಿ ತಿಂಗಳು ವಿದ್ಯುತ್‌ ಮೀಟರ್‌ ರೀಡರ್‌ಗಳು ನಿಗದಿತ ದಿನಾಂಕದಿಂದ ನಿಗದಿತ ದಿನಾಂಕದವರೆಗೆ ಬಳಕೆಯಾಗಿರುವ ವಿದ್ಯುತ್‌ ಯುನಿಟ್‌ ಸಂಖ್ಯೆ ಆಧರಿಸಿ ಮೀಟರ್‌ ರೀಡ್‌ ಮಾಡುತ್ತಿದ್ದರು. ಸಂಬಂಧಪಟ್ಟ ಬಿಲ್‌ ಅನ್ನು ಗ್ರಾಹಕರಿಗೆ ನೀಡಿ ಪಾವತಿಸುವಂತೆ ಸೂಚಿಸುತ್ತಿದ್ದರು.

ಆಗಸ್ಟ್ ತಿಂಗಳಲ್ಲಿ ಬೆಸ್ಕಾಂ ಮೀಟರ್‌ ರೀಡರ್‌ಗಳಿಗೆ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಗೆ ಮನೆ ಆಯ್ಕೆ ಮಾಡಿದೆ. ಮನೆ, ಮನೆಗಳಿಗೆ ‘ಯುಎಚ್ಐಡಿ’ ಸ್ಟಿಕ್ಕರ್‌ ಅಂಟಿಸುವ ಜವಾಬ್ದಾರಿ ನೀಡಿತ್ತು. ಇದಕ್ಕೆ ಕಾಲಮಿತಿಯನ್ನೂ ನಿಗದಿ ಮಾಡಿತ್ತು. ಹೀಗಾಗಿ ಎಲ್ಲಾ ಮೀಟರ್‌ ರೀಡರ್‌ಗಳು ಸ್ಟಿಕ್ಕರ್‌ ಅಂಟಿಸುವ ಕೆಲಸದಲ್ಲಿದ್ದರು. ಮೀಟರ್‌ ರೀಡಿಂಗ್‌ಗೆ ತಡವಾಗಿ ಹೋಗಿದ್ದರು. 30 ದಿನಗಳ ಬಳಕೆಯನ್ನು ಪರಿಗಣಿಸಿ ಬಿಲ್‌ ಜನರೇಟ್‌ ಮಾಡದೆ 35-40 ದಿನಗಳ ಬಳಕೆಯನ್ನು ಬಿಲ್‌ ಮಾಡಿದ್ದಾರೆ. ಹೀಗಾಗಿ ಮಾಸಿಕ 200 ಯುನಿಟ್‌ಗಿಂತ ಬಳಕೆ ಹೆಚ್ಚಾಗಿ, ಪ್ರತಿ ತಿಂಗಳು ಗೃಹ ಜ್ಯೋತಿ ಫಲಾನುಭವಿ ಆಗುತ್ತಿದ್ದ ಗ್ರಾಹಕರು ಪೂರ್ಣ ಮೊತ್ತ ಭರಿಸುವಂತಾಗಿದೆ.

ಪ್ರತಿ ತಿಂಗಳು 8ನೇ ತಾರೀಖಿಗೆ ಮೀಟರ್‌ ರೀಡಿಂಗ್‌ಗೆ ಸಿಬ್ಬಂದಿ ಬರಬೇಕಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ರೀಡರ್‌ 10 ದಿನ ತಡವಾಗಿ ಅಂದರೆ ಆ.18ರಂದು ಬಂದಿದ್ದರು. ಆದರೆ ಬಿಲ್‌ನಲ್ಲಿ ಬಿಲ್‌ ಅವಧಿ 08-08-2025- 08-09-2025 ಎಂದೇ ನಮೂದಾಗಿದೆ. ಪ್ರತಿ ತಿಂಗಳು 200 ಯುನಿಟ್‌ಗಿಂತ ಕಡಿಮೆ ಬರುತ್ತಿದ್ದ ಮೀಟರ್‌ನಲ್ಲಿ ಹೆಚ್ಚುವರಿ 8 ದಿನಗಳ ಅವಧಿಯ ಪರಿಣಾಮ 248 ಯುನಿಟ್‌ ಬಳಕೆ ಮಾಡಿರುವುದಾಗಿ ತೋರಿಸಿದೆ. ಇದರಿಂದ ನಾವು ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಪಡೆಯುವ ಅವಕಾಶದಿಂದ ವಂಚಿತರಾಗಿದ್ದೇವೆ. ನಮ್ಮದೇ ಮನೆಯ ಮತ್ತೊಂದು ಸಂಪರ್ಕಕ್ಕೆ ಪ್ರತಿ ತಿಂಗಳು 58 ಯುನಿಟ್‌ ಉಚಿತ ವಿದ್ಯುತ್‌ ಬರುತ್ತಿತ್ತು. ಈ ತಿಂಗಳು 84 ಯುನಿಟ್‌ ಆಗಿದೆ. ಹೆಚ್ಚುವರಿ ಮೊತ್ತ ಪಾವತಿಸುವಂತಾಗಿದೆ. ಇದೇ ರೀತಿ ನಮ್ಮ ಭಾಗದ ಹಲವರಿಗೆ ಸಮಸ್ಯೆಯಾಗಿದೆ ಎಂದು ಗ್ರಾಹಕರು ಹೇಳಿದ್ದಾರೆ. ಬಿಲ್‌ನಲ್ಲಿ 30 ದಿನಗಳೆಂದೇ ತೋರಿಸಿದರೂ ಹಲವು ಗ್ರಾಹಕರಿಗೆ ಏಕಾಏಕಿ ಬಳಕೆ ಪ್ರಮಾಣದಲ್ಲಿ ಏರಿಕೆ ದಾಖಲಾಗಿದೆ. ಸರ್ಕಾರದ ಈ ಎಡವಟ್ಟಿಗೆ ಗ್ರಾಹಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Latest Posts

Don't Miss