Friday, November 28, 2025

Latest Posts

ಹಾಯ್ ಫ್ರೆಂಡ್ಸ್ ಮಲ್ಲಮ್ಮ ಹಿಯರ್.. ಹಳ್ಳಿ ಅಜ್ಜಿ ಸೆಲೆಕ್ಟ್ ಆಗಿದ್ಹೇಗೆ?

- Advertisement -

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಹವಾ ಶುರುವಾಗಿದೆ. ಕಲರ್ಸ್ ಕನ್ನಡ ವಾಹಿನಿಯೇ ಅಧಿಕೃತವಾಗಿ ತನ್ನ ಸ್ಪರ್ಧಿಗಳನ್ನು ಪರಿಚಯಿಸುತ್ತಿದೆ. ಈ ನಡುವೆ, ಹಾಯ್​ ಫ್ರೆಂಡ್ಸ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಉತ್ತರ ಕರ್ನಾಟಕದ ಮಾತಿನ ಮಲ್ಲಿ​​ ಅಂತಾನೆ ಫೇಮಸ್ ಆಗಿರೋ ಮಲ್ಲಮ್ಮ ಈ ಶೋಗೆ ಮೂರನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ.

ಈ ಮಲ್ಲಮ್ಮ ಯಾರು? ಇವರ ಹಿನ್ನೆಲೆ ಏನು? ಅನ್ನೋದು ಸೋಶಿಯಲ್ ಮೀಡಿಯಾ ನೋಡೋರ್ಗೆ ಇವರ ಬಗ್ಗೆ ಗೊತ್ತೇ ಇರತ್ತೆ. ಹಾಗೊಂದು ವೇಳೆ ಗೊತ್ತಿಲ್ಲಾ ಅಂದ್ರು don’t worry ಯಾಕಂದ್ರೆ ಇಲ್ಲಿದೆ ಕಂಪ್ಲೇಟ್ ಮಾಹಿತಿ.

ಯಸ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿಗೆ ಸೇರಿದ ಮಲ್ಲಮ್ಮ, ಮೂಲತಃ ಹಳ್ಳಿಯವರು. ಇವರ ಸ್ಪೆಷಲ್ ಏನಪ್ಪ ಅಂದ್ರೆ ಮಾತು, ಮಾತು. ಬರೀ ಮಾತು. ತಮ್ಮ ಹಾಸ್ಯ, ನಗುವಿನ ಮೂಲಕ ಹಾಗು ಮನಸ್ಸಿಗೆ ತಟ್ಟುವ ಮಾತುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಫೇಮಸ್ ಆಗಿದ್ದಾರೆ. ‘mallamma_talks’ ಎಂಬ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 1 ಲಕ್ಷದ 74 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಯೂಟ್ಯೂಬ್‌ನಲ್ಲೂ ಸುಮಾರು 16 ಸಾವಿರ subscribers ಗಳನ್ನು ಹೊಂದಿದ್ದಾರೆ.

15 ವರ್ಷವಿರುವಾಗಲೇ ಅಂದ್ರೆ ಅತಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಾರೆ. 30 ವರ್ಷ ಅನ್ನೋ ಅಷ್ಟರಲ್ಲಿ ಗಂಡನನ್ನ ಕಳೆದುಕೊಂಡ ಮಲ್ಲಮ್ಮ ಕಡು ಕಷ್ಟದ ಜೀವನವನ್ನು ಕಂಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಬೆಂಗಳೂರಿಗೆ ಬಂದು ಧೈರ್ಯವಾಗಿ ಜೀವನ ಕಟ್ಟಿಕೊಂಡಿದ್ದಾರೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, ಹಾಸ್ಯಭರಿತ ಮಾತುಗಳಿಂದ ಕಿಚ್ಚ ಸುದೀಪ್ ಅವರನ್ನೇ ಮಲ್ಲಮ್ಮ ನಗಿಸಿದ್ದಾರೆ. ಬಿಗ್ ಬಾಸ್ ಕುರಿತು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಿಗ್ ಬಾಸ್ ಒಳಗೆ ಹೇಗೆ? ಎಂಬ ಸುದೀಪ್ ಅವರ ಪ್ರಶ್ನೆಗೆ ಮಲ್ಲಮ್ಮ ‘ಜಗಳ ಮಾಡೋದು ರೀ’ ಎಂಬ ನಿರಾತಂಕ ಉತ್ತರ ನೀಡಿ ವೀಕ್ಷಕರನ್ನು ಆಕರ್ಷಿಸಿದ್ದಾರೆ.

ಮಲ್ಲಮ್ಮ ತಮ್ಮ ಹಾಸ್ಯ reels ಹಾಗೂ ಹಳ್ಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಡಿಯೋಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ನಿರ್ಮಿಸಿಕೊಂಡಿದ್ದಾರೆ. ತಮ್ಮ ದಿನನಿತ್ಯದ ಸರಳ ಜೀವನ ಮತ್ತು ನಗೆತನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ಇನ್ನೊಸೆಂಟ್ ಇನ್‌ಫ್ಲುಯೆನ್ಸರ್’ ಎಂದೇ ಖ್ಯಾತಿ ಪಡೆದಿದ್ದಾರೆ.

‘ಮಾತನ್ನೇ ಬಂಡವಾಳವನ್ನಾಗಿ ಮಾಡಿರುವ’ ಮಲ್ಲಮ್ಮ, ತಮ್ಮ ನೈಜ ವ್ಯಕ್ತಿತ್ವದಿಂದ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತಾರೆ ಎನ್ನುವುದನ್ನು ನೋಡೋಕೆ ಅಭಿಮಾನಿಗಳು ಹೆಚ್ಚು ನಿರೀಕ್ಷೆಯಲ್ಲಿ ಇದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ 28 ರಿಂದ ಶುಭಾರಂಭವಾಗುತ್ತಿದೆ. ಸೋಷಿಯಲ್ ಮೀಡಿಯಾದಿಂದ ಬಂದ ಈ ಹೊಸ ತಾರೆ ಬಿಗ್ ಬಾಸ್ ಮನೆ ಒಳಗೆ ಯಾವ ರೀತಿ ಬದಲಾವಣೆ ತರ್ತಾರೆ ಎಂಬುದನ್ನು ನೋಡಬೇಕು!

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss