ಬಿಗ್‌ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ, ಯಾರೂ ಊಹಿಸಿರದ ಸ್ಪರ್ಧಿಗಳು ಬಂದಿದ್ದಾರೆ. ಜೊತೆಗೆ ಪ್ರತಿ ಬಾರಿ 17 ಅಥವಾ 18 ಸ್ಪರ್ಧಿಗಳು ಬರೋದು ವಾಡಿಕೆ. ಆದರೆ, ಈ ಬಾರಿ ಸ್ಪರ್ಧಿಗಳ ಸಂಖ್ಯೆ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. ಈ ಅನುಮಾನಕ್ಕೆ ಕಾರಣವಾಗಿರೋದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪೋಸ್ಟರ್.
ಮೂವರ ಹೆಸರು ರಿವೀಲ್ ಮಾಡಿ, ಮಿಕ್ಕಿದವರು ಯಾರು ಎಂದು, ಪ್ರಶ್ನೆ ಮಾಡುವ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಾತಿನ ಮಲ್ಲಿ ಮಲ್ಲಮ್ಮ ಹಾಗೂ ಕಾಕ್ರೋಚ್ ಸುಧಿ, ಮಂಜುಭಾಷಿಣಿ ಹೆಸರು ಇದೆ.
ಈ ಮೂವರ ಫೋಟೋ ಅಕ್ಕಪಕ್ಕದಲ್ಲಿ ಖಾಲಿ ಜಾಗಗಳನ್ನು ಬಿಡಲಾಗಿದೆ. ಇದನ್ನು ಲೆಕ್ಕ ಹಾಕಿದರೆ ಒಟ್ಟು 19 ಆಗುತ್ತದೆ. ಇದರಲ್ಲಿ ಹಲವು ಕ್ಷೇತ್ರದವರು ಇರಲಿದ್ದಾರೆ. ಮಂಜು ಅವರು ಕಿರುತೆರೆಯವರು. ಸುಧಿ ಹಿರಿತೆರೆಯವರು ಹಾಗೂ ಮಲ್ಲಮ್ಮ ಸೋಶಿಯಲ್ ಮೀಡಿಯಾ ಸ್ಟಾರ್. ಇನ್ನುಳಿದವರು ಯಾರು. ಯಾವ ಕ್ಷೇತ್ರದವರೆಂಬ ಕುತೂಹಲ ಹೆಚ್ಚಾಗಿದೆ.