Wednesday, October 15, 2025

Latest Posts

13ರ ಹುಡುಗಿಗೆ 20 ಲಕ್ಷ : ಮೈಸೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ

- Advertisement -

ಮೈಸೂರಿನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ಜಾಲ ಬಯಲಿಗೆ ಬಂದಿದೆ. ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಇಬ್ಬರು ದಂಧೆಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಆಗತಾನೆ ಋತುಮತಿಯಾದ ಬಾಲಕಿಯನ್ನೇ ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ಶೋಭಾ ಹಾಗೂ ತುಳಸಿಕುಮಾರ್‌ ಎನ್ನುವರನ್ನು ಬಂಧಿಸಲಾಗಿದೆ. ಇವರಿಬ್ಬರು ವಾಟ್ಸಪ್‌ ಮೂಲಕ ವಿಡಿಯೋ ಮೂಲಕ ಬಾಲಕಿಯರನ್ನು ಗ್ರಾಹಕರಿಗೆ ತೋರಿಸುತ್ತಿದ್ದರು.

ಅಪ್ರಾಪ್ತ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ರೇಟ್‌ ಫಿಕ್ಸ್‌ ಮಾಡಿದ್ದರು. ವಾಟ್ಸಾಪ್‌ ವಿಡಿಯೋ ಮುಲಕ ಬಾಲಕಿಯನ್ನು ಗ್ರಾಹಕರಿಗೆ ತೋರಿಸಿ ಸೆಳೆಯುತ್ತಿದ್ದರು. ಈ ಕೃತ್ಯವನ್ನು ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೀಗೆ ಬಂಧಿತ ಪಿಂಪ್​ ಗಳು ಹುಡುಗಿರಯನ್ನು ತೋರಿಸಿ ರೇಟ್ ಫಿಕ್ಸ್ ಮಾಡುತ್ತಿದ್ದರು. ಅದರಂತೆ 12 ರಿಂದ 13 ವರ್ಷದ ಬಾಲಕಿಯನ್ನು ತೋರಿಸಿ ಬರೋಬ್ಬರಿ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸದ್ಯ ಒಡನಾಡಿ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಬ್ರೋಕರ್​ಗಳಾದ ಶೋಭಾ ಹಾಗೂ ತುಳಸಿಕುಮಾರ್ ಎನ್ನುವರನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss