Wednesday, October 15, 2025

Latest Posts

ಸಚಿವ ಸಂಪುಟಕ್ಕೆ ನಾಗೇಂದ್ರ ಕಮ್‌ಬ್ಯಾಕ್‌?

- Advertisement -

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಚಿವ ಜಮೀರ್‌ ಅಹಮದ್ ಅವರು ಸ್ಪೋಟಕ ಸುಳಿವೊಂದನ್ನ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಜಮೀರ್, ಮಾಜಿ ಸಚಿವ ಬಿ. ನಾಗೇಂದ್ರ ಮಂತ್ರಿ ಆಗೇ ಆಗ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ. ಎಸ್‌ಐಟಿ ಕ್ಲೀನ್‌ಚಿಟ್‌ ಕೊಟ್ಟಿದ್ದು, ನಾಗೇಂದ್ರ ಸಚಿವರಾಗುತ್ತಾರೆ. 1 ವಾರ ಅಥವಾ 10 ದಿನಗಳಲ್ಲಿ ಎಲ್ಲವೂ ಕ್ಲಿಯರ್‌ ಆಗಲಿದೆ ಎಂದು ಹೇಳಿದ್ದಾರೆ.

ಕ್ಯಾಬಿನೆಟ್‌ ರೀಶಫಲ್‌ ಮಾಡಬೇಕೆಂಬುದು ಇದೆ. ಅದೆಲ್ಲಾ ಯಾವಾಗ ಬೇಕಾದರೂ ಆಗಬಹುದು. ಎಲ್ಲವನ್ನೂ ಹೈಕಮಾಡ್‌ ತೀರ್ಮಾನ ಮಾಡುತ್ತದೆ. ಬದಲಾವಣೆಯನ್ನು ನಾನು, ನಾಗೇಂದ್ರ ತೀರ್ಮಾನ ಮಾಡೋದಕ್ಕೆ ಆಗಲ್ಲ. ಹೈಕಮಾಂಡ್‌ ತೀರ್ಮಾನ ಮಾಡ್ಬೇಕು ಎಂದ್ರು.

ಸಿಎಂ ಬದಲಾವಣೆ ವಿಚಾರವಾಗಿಯೂ ಜಮೀರ್‌ ಅಹಮದ್‌ ಕ್ಲಾರಿಟಿ ಕೊಟ್ಟಿದ್ದಾರೆ. ಸದ್ಯಕ್ಕೊಂದು ಸಿಎಂ ಚೇರ್‌ ಖಾಲಿ ಇಲ್ಲ. 5 ವರ್ಷ ಸಿದ್ದರಾಮಯ್ಯನವರೇ ಇರ್ತಾರೆ ಅಂತಾ, ಊಹಾಪೋಹಗಳಿಗೆಲ್ಲಾ ತೆರೆ ಎಳೆಯುವ ಪ್ರಯತ್ನವನ್ನು ಜಮೀರ್ ಮಾಡಿದ್ರು.

1 ವರ್ಷದ ಬಳಿಕ ಮೊದಲ ಬಾರಿಗೆ ಬಳ್ಳಾರಿ ನಗರಕ್ಕೆ ಆಗಮಿಸಿದ್ದ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌, ಕೆಡಿಪಿ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ರು. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ, 95 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ, ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿತ್ತು.

- Advertisement -

Latest Posts

Don't Miss