Sunday, October 5, 2025

Latest Posts

ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ‘ಯಶವಂತ್ ಸರ್‌ದೇಶಪಾಂಡೆ

- Advertisement -

ಖ್ಯಾತ ರಂಗಕರ್ಮಿ, ನಾಟಕಕಾರ, ಚಲನಚಿತ್ರ ಹಾಗೂ ಟಿವಿ ನಟ ಯಶವಂತ್ ಸರ್‌ದೇಶಪಾಂಡೆ ನಿಧನರಾಗಿದ್ದಾರೆ. ಸೆಪ್ಟೆಂಬರ್ 29 ರಂದು ಬೆಳಗ್ಗೆ ಹೃದಯಾಘಾತದಿಂದ ಚಿತ್ರರಂಗವನ್ನ ಅಗಲಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ವಿಜಯಪುರ ಜಿಲ್ಲೆಯ ಉಕ್ಕಲಿಯಲ್ಲಿ ಜನಿಸಿದ ಯಶವಂತ್ ಸರ್‌ದೇಶಪಾಂಡೆ, 60ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು.

ಯದ್ವಾ-ತದ್ವಾ’, ‘ಬಣ್ಣದ ಬುಗುರಿ’, ‘ದಶಾವತಾರ’, ‘ಪರ್ವ’, ‘ತುಂತುರು’ ಮುಂತಾದ ಸೀರಿಯಲ್‌ಗಳಲ್ಲಿ ಯಶವಂತ್ ಸರ್‌ದೇಶಪಾಂಡೆ ನಟಿಸಿದ್ದರು. ಆಲ್ ದಿ ಬೆಸ್ಟ್, ಅಂಧಯುಗ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ನಾಟಕಗಳು ಭಾರೀ ಯಶಸ್ಸು ಕಂಡಿದ್ದವು. ಸೀರಿಯಲ್‌ಗಳಲ್ಲಿ ಹಾಗೂ ರಾಮ ಶಾಮ ಭಾಮ, ಅಮೃತಧಾರೆ ಮುಂತಾದ ಸಿನಿಮಾಗಳಲ್ಲಿಯೂ ಮಿಂಚಿದ್ದರು.

ಪತ್ನಿ ಮಾಲತಿ ಸರ್‌ದೇಶಪಾಂಡೆ ಸಹ ಕಲಾವಿದೆ. ಇಬ್ಬರೂ ಸೇರಿ ಹಲವು ನಾಟಕಗಳು ಹಾಗೂ ಟಿವಿ ಶೋಗಳಲ್ಲಿ ಭಾಗವಹಿಸಿದ್ದರು. ಇಂತಹ ಮಹಾನ್ ಕಲಾವಿದ ತೀವ್ರ ಹೃದಯಾಘಾತದಿಂದ ಚಿರನಿದ್ರೆಗೆ ಜಾರಿದ್ದಾರೆ. ಯಶವಂತ್ ಸರ್‌ದೇಶಪಾಂಡೆ ಅವರ ಹಠಾತ್ ನಿಧನಕ್ಕೆ ಕಲೆ ಜಗತ್ತು ಕಂಬನಿ ಮಿಡಿದಿದೆ. ಅನೇಕ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ಸರದಿ ಮುರಿದ ಸ್ನೇಹಿತ… ಕನಸುಗಳ ಬೆಟ್ಟವನ್ನೇ ಹೊತ್ತಿದ್ದ.. ಅನಿರೀಕ್ಷಿತ ಆಘಾತ ತಂದವ.. ಓಂ ಶಾಂತಿ ಎಂದು ಪಿ ಶೇಷಾದ್ರಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss