Sunday, October 5, 2025

Latest Posts

ಈ ಸಲ ಅಂಬಾರಿ ಡಿಫರೆಂಟ್ : 3 ಆನೆಗಳಿಗೆ ಒಲಿದ ಅದೃಷ್ಟ!

- Advertisement -

ಇದೇ ಮೊದಲು ಬಾರಿಗೆ ದಸರಾಗೆ ಆಗಮಿಸಿರುವ ಹೆಣ್ಣಾನೆಗಳಾದ ರೂಪ, ಹೇಮಾವತಿ ಮತ್ತು ಗಂಡಾನೆ ಶ್ರೀಕಂಠನಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ.

ಸಾಮಾನ್ಯವಾಗಿ ದಸರಾಗೆ ಮೊದಲ ಬಾರಿಗೆ ಆಗಮಿಸಿದ ಹೊಸ ಆನೆಗಳನ್ನು ಜಂಬೂ ಸವಾರಿ ಮೆರವಣಿಗೆಗೆ ಬಳಕೆ ಮಾಡುವುದಿಲ್ಲ. ಈ ಆನೆಗಳೇ ಮುಂದಿನ ವರ್ಷದ ದಸರಾಗೆ ಆಗಮಿಸಿದರೆ ಆಗ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ಹೊಸ ಆನೆಗಳಾದ ರೂಪ, ಹೇಮಾವತಿ ಮತ್ತು ಶ್ರೀಕಂಠನಿಗೆ ಅದೃಷ್ಟ ಒಲಿದು ಬಂದಿದ್ದು, ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಅಂಬಾರಿಯನ್ನು ಗಜಪಡೆಯ ಕ್ಯಾಪ್ಟನ್‌ ಅಭಿಮನ್ಯು ಸತತ 6 ನೇ ಬಾರಿಗೆ ಹೊರಲಿದ್ದು, ಅವನಿಗೆ ಕುಮ್ಕಿ ಆನೆಗಳಾಗಿ ರೂಪಾ ಹಾಗೂ ಕಾವೇರಿ ಸಾಥ್‌ ನೀಡಲಿದ್ದಾರೆ. ಅರಮೆನಯಲ್ಲಿ ಸೋಮವಾರ ಆಯೋಜಿಸಿದ್ದ ಮಾವುತರು, ಕಾವಾಡಿಗರು, ಚಿರತೆ ಕಾರ್ಯಪಡೆ ಸಿಬ್ಬಂದಿಗೆ ಕಿಟ್‌ ವಿತರನೆ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆನೆಗಳ ಜವಾಬ್ದಾರಿ ಹಂಚಿಕೆಯನ್ನು ಮಾಡಿದರು.

ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಿ ಆಯ್ಕೆಯಾಗಿದ್ದು, ಸಾಲಾನೆಗಳ ಮೂರು ತಂಡವನ್ನು ರಚಿಸಲಾಗಿದೆ. ಮೊದಲ ತಂಡವನ್ನು ಶ್ರೀರಂಗಪಟ್ಟಣ ದಸರೆಯಲ್ಲಿ ಅಂಬಾರಿ ಹೊತ್ತಿದ್ದ ಮಹೇಂದ್ರ ಮುನ್ನಡೆಸಲಿದ್ದು, ಅವನೊಂದಿಗೆ ಇದೇ ಮೊದಲ ಬಾರಿ ಬಂದಿರುವ ಹಾಗೂ ಪಟ್ಟದಾನೆಯಾಗಿ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ದೈತ್ಯ ಶ್ರೀಕಂಠ ಹಾಗೂ ಲಕ್ಷ್ಮಿ ಇರಲಿದ್ದಾರೆ.

ಸಾಲಾನೆಗಳ ಎರಡನೇ ತಂಡದಲ್ಲಿ ಭೀಮ, ಕಂಜನ್ ಹಾಗೂ ಏಕಲವ್ಯ ಇರಲಿದ್ದು, 3ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ ಹಾಗೂ ಹೇಮಾವತಿ ಹೆಜ್ಜೆ ಹಾಕಲಿದ್ದಾರೆ. ಇದೇ ಮೊದಲ ಬಾರಿ ಎಲ್ಲ 14 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಈ ಹಿಂದೆ ಒಂದೆರಡು ಆನೆಗಳಿಗೆ ವಿಶ್ರಾಂತಿ ನೀಡುವುದು ವಾಡಿಕೆಯಾಗಿತ್ತು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss