Tuesday, November 18, 2025

Latest Posts

ಹುಕ್ಕೇರಿ ಚುನಾವಣೆ ಸೋಲಿಗೆ ಅದೇ ಕಾರಣ?

- Advertisement -

ಹುಕ್ಕೇರಿ ಸಹಕಾರ ಸಂಘದ ಚುನಾವಣೆಯಲ್ಲಿ, ರಮೇಶ್‌ ಕತ್ತಿ ವಿರುದ್ಧ ಜಾರಕಿಹೊಳಿ ಕುಟುಂಬಕ್ಕೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಸಚಿವ ಸತೀಶ್‌ ಜಾರಕಿಹೊಳಿ, ಬೆಳಗಾವಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಎಲೆಕ್ಷನ್‌ನಲ್ಲಿ ಸೋಲು ಗೆಲುವು ಇದ್ದಿದ್ದೇ. ಮುಂದೆ ಗೆಲ್ಲಬಹುದು. ಹುಕ್ಕೇರಿ ಸೋಲು ಪಾಠ ಇದ್ದಂತೆ. ಸ್ಟ್ರ್ಯಾಟಜಿ ಮಾಡುವಲ್ಲಿ ವಿಫಲ ಆಗಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಸೋತಿದ್ದೇವೆ ಅಂತಾ ಹೇಳಿದ್ರು.

ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ನಮ್ಮ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕಿತ್ತು. ಮುಂದಿನ ಚುನಾವಣೆಗಳಿಗೆ ತಳಪಾಯ ಸಿದ್ಧ ಮಾಡಬೇಕಿತ್ತು. ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇವೆ. ಹುಕ್ಕೇರಿಯಲ್ಲಿ ನಮ್ದು ಬೇಸ್‌ ಇರ್ಲಿಲ್ಲ. ಆದ್ರೀಗ ಕಾರ್ಯಕರ್ತರು ರೆಡಿಯಾಗಿದ್ದಾರೆ.

ಸಹಕಾರ ಕ್ಷೇತ್ರ ನಮಗೆ ಹೊಸದು. ಕೆಲವೆಡೆ ತಿಳಿದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಸೋತ ಮೇಲೆ ಎಲ್ಲವೂ ಗೊತ್ತಾಗ್ತಿದೆ. ನಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ವಿರೋಧಿಗಳೆಲ್ಲಾ ಒಗ್ಗಟ್ಟಾಗಿ ಎಲೆಕ್ಷನ್‌ ಮಾಡಿದ್ದಾರೆ.

ಅವರು 30 ವರ್ಷ ರಾಜಕಾರಣ ಮಾಡಿ 20 ಸಾವಿರ ವೋಟು ಪಡೆದಿದ್ದಾರೆ. ನಾವು 3 ತಿಂಗಳು ರಾಜಕಾರಣ ಮಾಡಿ 12 ಸಾವಿರ ವೋಟ್‌ ಪಡೆದಿದ್ದೇವೆಂದು, ರಮೇಶ್‌ ಕತ್ತಿ ಬಣದ ಗೆಲುವಿನ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಗೋಕಾಕ್‌ನಲ್ಲಿ ಡ್ರಗ್ಸ್‌ ಮಾಫಿಯಾ ಇದೆ ಅನ್ನೋ ರಮೇಶ್‌ ಕತ್ತಿ ಆರೋಪಕ್ಕೆ, ಸತೀಶ್‌ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ. 20 ವರ್ಷದಿಂದ ಪ್ರತಿ ಎಲೆಕ್ಷನ್‌ನಲ್ಲೂ ಹೇಳ್ತಾರೆ. ಇದೇನು ಹೊಸದೇನಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.

- Advertisement -

Latest Posts

Don't Miss