ಅಮೆರಿಕ ಖಜಾನೆಯಲ್ಲಿನ ಚಿನ್ನದ ಮಾರುಕಟ್ಟೆ ಮೌಲ್ಯ ಇದೇ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಭಾರತೀಯ ರೂಪಾಯಿಯಲ್ಲಿ ಈ ಮೌಲ್ಯ 88 ಲಕ್ಷ ಕೋಟಿ ರೂ. ಆಗುತ್ತದೆ. ಈ ಬೆಳವಣಿಗೆ, ಭಾರತದಾದ್ಯಂತ ದೊಡ್ಡ ಚಿನ್ನದ ಬಳಕೆದಾರ ದೇಶದ ಮೇಲೆ ನೇರವಾಗಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕ ಸರ್ಕಾರದ ವರದಿಯ ಪ್ರಕಾರ, ಅವರು ಹೊಂದಿರುವ ಚಿನ್ನದ ಅಧಿಕೃತ ಮೌಲ್ಯವು ಕೇವಲ 11 ಬಿಲಿಯನ್ ಡಾಲರ್. ಆದರೆ ಮಾರುಕಟ್ಟೆಯಲ್ಲಿ ಅದೇ ಚಿನ್ನಕ್ಕೆ ಈಗ 1 ಟ್ರಿಲಿಯನ್ ಡಾಲರ್ ಮೌಲ್ಯ ಸಿಕ್ಕಿದೆ. ಅಂದರೆ, ಖಜಾನೆಯಲ್ಲಿನ ಚಿನ್ನದ ಮೌಲ್ಯ ಈಗ ಸರಿಸುಮಾರು 90 ಪಟ್ಟು ಹೆಚ್ಚಾಗಿದೆ. ಇದು ಚಿನ್ನದ ಮೇಲಿನ ಹೂಡಿಕೆಗೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಭಾರಿ ಒತ್ತಡವನ್ನು ಪ್ರತಿಬಿಂಬಿಸುತ್ತಿದೆ.
ಅಮೆರಿಕ ಖಜಾನೆಯ ಚಿನ್ನದ ಮೊತ್ತ 1 ಟ್ರಿಲಿಯನ್ ಡಾಲರ್ ದಾಟಿದ್ರೆ
ಭಾರತದ ಮೇಲೆ ಹೇಗೆ ಪರಿಣಾಮ ಬಿರತ್ತೆ ಅನ್ನೋ ಪ್ರಶ್ನೆ ಸಹಜ. ಭಾರತ ಚಿನ್ನವನ್ನು ಬಹುಮಟ್ಟಿಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ರಾಷ್ಟ್ರ. ಚಿನ್ನದ ಮೌಲ್ಯ ಎಷ್ಟು ಏರಿದರೂ ಭಾರತೀಯರು ಅದರ ಖರೀದಿಯಲ್ಲಿ ಹಿಂದೆಬರುವವರಲ್ಲ. ಹಬ್ಬದ ಋತು – ವಿಶೇಷವಾಗಿ ದಸರಾ, ದೀಪಾವಳಿ – ಚಿನ್ನದ ಖರೀದಿಗೆ ಅತ್ಯುತ್ತಮ ಕಾಲ. ಇದರಿಂದಾಗಿ ಬೇಡಿಕೆ ಎದೆಯಷ್ಟು ಹೆಚ್ಚುತ್ತಲೇ ಹೋಗತ್ತೆ.
ಆದರೆ, ಅಮೆರಿಕದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿದರೆ, ಅದನ್ನು ಭಾರತ ಆಮದು ಮಾಡುವಾಗ ಜಿಎಸ್‌ಟಿ, ಕಸ್ಟಮ್ಸ್ ಡ್ಯೂಟಿ, ತುರ್ತು ಶುಲ್ಕ ಸೇರಿ ಖರ್ಚು ಹೆಚ್ಚುತ್ತದೆ. ಇದರ ನೇರ ಪರಿಣಾಮವಾಗಿ ಭಾರತದಲ್ಲಿಯೂ ಚಿನ್ನದ ದರಗಳು ಗಗನಕ್ಕೇರುತ್ತವೆ.
ಉದಾಹರಣೆಗೆ, ಸೆ. 30ರ ಲೆಕ್ಕಾಚಾರದ ಪ್ರಕಾರ, ಒಂದು ಔನ್ಸ್ ಚಿನ್ನಕ್ಕೆ ಅಮೆರಿಕದಲ್ಲಿ 3,824.50 ಡಾಲರ್ ಆಗಿದೆ. ಒಂದು ಔನ್ಸ್ ಎಂದರೆ ಭಾರತದಲ್ಲಿ 31.10 ಗ್ರಾಂ.ಗಳಿಗೆ ಸಮ. ಒಂದು ಔನ್ಸ್ ಗೆ ಅಲ್ಲೀಗ 3,39,747 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ₹1,13,249 ರೂ. ಜಿಎಸ್‌ಟಿ ಮತ್ತು ಸ್ಥಳೀಯ ಶುಲ್ಕಗಳನ್ನು ಸೇರಿಸಿ ಸೆ.30ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ದರ ₹1,18,310ಗೆ ತಲುಪಿದೆ. ಪ್ರತಿ ಗ್ರಾಂ ದರ ₹11,831 ಆಗಿದೆ. ಇದು ಸಾಮಾನ್ಯ ಮಧ್ಯಮ ವರ್ಗದ ಖರೀದಿಗೆ ಅಡೆತಡೆಯಾಗಿ ಪರಿಣಮಿಸಿದೆ.
ವರದಿ : ಲಾವಣ್ಯ ಅನಿಗೋಳ