Thursday, October 2, 2025

Latest Posts

ನಾವು ಪತ್ರ ಕೊಡ್ತೀವಿ, ನೀವು ದುಡ್ಡು ಕೊಡ್ಸಿ – ನಗುತ್ತಲೇ HDKಗೆ ತಿರುಗೇಟು ನೀಡಿದ ಸಿದ್ದರಾಮಯ್ಯ!

- Advertisement -

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಕೇಂದ್ರ ಸರ್ಕಾರದ ಜೊತೆ ಸಂಘರ್ಷ ಬೇಡ ಅನ್ನುವ ಹೇಳಿಕೆ ಮತ್ತು ಅದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇರ ತಿರುಗೇಟು ಇವೆರಡೂ ಈಗ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿವೆ. HDK ಅವರ ಈ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಬಗ್ಗೆ ನಿರಂತರವಾಗಿ ಅದರ ಬಗ್ಗೆ ಮಾತನಾಡಬೇಡಿ. ಕೇಂದ್ರದ ಜೊತೆಗೆ ಸಂಘರ್ಷ ಸರಿ ಅಲ್ಲ. ಕೇಂದ್ರದ ಜೊತೆ ಘರ್ಷಣೆಗೆ ಹೋಗಬೇಡಿ. ಹೋದ್ರೆ ಏನು ಸಿಗೋದಿಲ್ಲ. ಕೆಲ ವಿಷಯಗಳು ನನಗೆ ಗೊತ್ತಿದೆ ಆದ್ರೆ ನಾನು ಮಾತನಾಡೋದಿಲ್ಲ. ಪ್ರಧಾನಿ ಮೇಲೆ ನಂಬಿಕೆನೂ ಇದೆ ವಿಶ್ವಾಸವು ಇದೆ ಅಂತ HD ಕುಮಾರಸ್ವಾಮಿ ಹೇಳಿದ್ದಾರೆ.

ಆದ್ರೆ ಈಗ ಕೇಂದ್ರದ ಜೊತೆ ಘರ್ಷಣೆಗೆ ಹೋಗಬೇಡಿ. ಹೋದ್ರೆ ಏನು ಸಿಗೋದಿಲ್ಲ ಅನ್ನುವ ಅವರ ಹೇಳಿಕೆಗೆ ಈಗ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆ ಸ್ವಾಗತ ಮಾಡ್ತೀವಿ. ಹಿಂದೆ ಬರಗಾಲ ಬಂದಂತಹ ಸಂದರ್ಭದಲ್ಲಿ ಪರಿಹಾರವನ್ನ ನಾವು ಸುಪ್ರೀಂ ಕೋರ್ಟ್ ಗೆ ಹೋಗಿ ತಗೋಬೇಕಾಯಿತು.

ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿ, ಅದು ಆರ್ಡರ್ ಕೊಟ್ಟಮೇಲೆ ಪರಿಹಾರ ಸಿಕ್ಕಿದೆ ಎಂದಿದ್ದಾರೆ. ನಾವು ಪತ್ರ ಕೊಡ್ತೀವಿ ನೀವು ದುಡ್ಡು ಕೊಡ್ಸಿ. ಕುಮಾರಸ್ವಾಮಿಯವರೇ ಇದ್ದಾರಲ್ಲಾ ಅವರೇ ಪರಿಹಾರ ಕೊಡಿಸಿ ಕೊಡ್ಲಿ ನಗುತ್ತಲೇ ತಿರುಗೇಟನ್ನ ನೀಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss