Thursday, December 4, 2025

Latest Posts

ಭಾರತದ ಟಾಪ್‌ 10 ಶ್ರೀಮಂತರು : ಬೆಂಗಳೂರಿಗೂ 3 ನೇ ಸ್ಥಾನ

- Advertisement -

ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕುಟುಂಬ ಮತ್ತೆ ನಂ.1 ಸ್ಥಾನ ಅಲಂಕರಿಸಿದೆ. M3M ಇಂಡಿಯಾ ಹಾಗೂ ಹುರೂನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಬಿಡುಗಡೆಯಾದ 14ನೇ ಆವೃತ್ತಿಯ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತು ಕುಟುಂಬದ ನಿವ್ವಳ ಆಸ್ತಿ 9.55 ಲಕ್ಷ ಕೋಟಿ ರೂ ಆಗಿದ್ದು, ಮೊದಲ ಸ್ಥಾನದಲ್ಲಿ ಉಳಿಯುತ್ತಿದ್ದಾರೆ.

ಗೌತಮ್ ಅದಾನಿ ಮತ್ತು ಕುಟುಂಬದ ಆಸ್ತಿಮೌಲ್ಯ 8.15 ಲಕ್ಷ ಕೋಟಿ ರೂ ಆಗಿದ್ದು, ಅಂಬಾನಿ ಫ್ಯಾಮಿಲಿಯ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅದ್ಭುತವಾಗಿ, ಎಚ್‌ಸಿಎಲ್ ಟೆಕ್ನಾಲಜೀಸ್‌ನ ರೋಷನಿ ನಾದರ್ ಮಲ್ಲೊತ್ರಾ ಮತ್ತು ಕುಟುಂಬ ಮೊದಲ ಬಾರಿಗೆ ಟಾಪ್-3 ಸ್ಥಾನವನ್ನು ಪಡೆದಿದ್ದಾರೆ. ಅವರ ಆಸ್ತಿಮೌಲ್ಯ 2.84 ಲಕ್ಷ ಕೋಟಿ ರೂ ಆಗಿದ್ದು, ರೋಷನಿ ನಾದರ್ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ.

ಇಂಡಿಯಾ ಶ್ರೀಮಂತರ ಪಟ್ಟಿ 2025ರ ಟಾಪ್-10
ಮುಕೇಶ್ ಅಂಬಾನಿ ಕುಟುಂಬ 9.55 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಇದ್ದು, ಮೊದಲನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ ಕುಟುಂಬ 8.14 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು, 2 ನೇ ಸ್ಥಾನದಲ್ಲಿದ್ದಾರೆ. ಎಚ್‌ಸಿಎಲ್ ಟೆಕ್ನಾಲಜೀಸ್‌ನ ರೋಷನಿ ನಾದರ್‌ ಮಲ್ಲೊತ್ರಾ ಕುಟುಂಬ 2.84 ಲಕ್ಷ ಕೋಟಿ ರೂ ಆಸ್ತಿ ಹೊಂದಿದ್ದು, 3 ನೇ ಸ್ಥಾನದಲ್ಲಿದ್ದಾರೆ. ಸೈರಸ್ ಪೂನಾವಾಲ ಕುಟುಂಬ 2.46 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 4 ನೇ ಸ್ಥಾನದಲ್ಲಿದ್ದಾರೆ.

ಇನ್ನು ಉಳಿದಂತೆ ಕುಮಾರಮಂಗಲಂ ಬಿರ್ಲಾ ಕುಟುಂಬ 2.32 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 5 ನೇ ಸ್ಥಾನದಲ್ಲಿದ್ದಾರೆ. ನೀರಜ್ ಬಜಾಜ್ ಕುಟುಂಬ 2.32 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 6 ನೇ ಸ್ಥಾನದಲ್ಲಿದ್ದಾರೆ. ದಿಲೀಪ್ ಸಾಂಘವಿ 2.30 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 7 ನೇ ಸ್ಥಾನದಲ್ಲಿದ್ದಾರೆ. ಅಜೀಮ್ ಪ್ರೇಮ್‌ಜಿ ಕುಟುಂಬ 2.21 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 8 ನೇ ಸ್ಥಾನದಲ್ಲಿದ್ದಾರೆ.

ಗೋಪಿಚಂದ್ ಹಿಂದೂಜಾ ಫ್ಯಾಮಿಲಿ 1.85 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 9 ನೇ ಸ್ಥಾನದಲ್ಲಿದ್ದಾರೆ. ರಾಧಾಕಿಶನ್ ದಮಾನಿ ಕುಟುಂಬ 1.82 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದು 10 ನೇ ಸ್ಥಾನದಲ್ಲಿದ್ದಾರೆ. ಇನ್ನು ಪತಂಜಲಿ ಆಯುರ್ವೇದ್ ಸಂಸ್ಥೆಯ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಅವರು 43,640 ಕೋಟಿ ರೂ ನೊಂದಿಗೆ 57ನೇ ಅತಿ ಶ್ರೀಮಂತ ಭಾರತೀಯ ಎನಿಸಿದ್ದಾರೆ. ಮೇಘ ಎಂಜಿನಿಯರಿಂಗ್ ಸಂಸ್ಥೆಯ ಪಿ ಪಿಚಿ ರೆಡ್ಡಿ ಹಾಗೂ ಪಿವಿ ಕೃಷ್ಣ ರೆಡ್ಡಿ ಅವರು ಕ್ರಮವಾಗಿ 60 ಮತ್ತು 62ನೇ ಸ್ಥಾನದಲ್ಲಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss