Thursday, November 27, 2025

Latest Posts

ರಸ್ತೆಗುಂಡಿ ಸರ್ಕಾರದ ಜವಾಬ್ದಾರಿ – ಒಪ್ಪಿಕೊಂಡ ರಾಮಲಿಂಗಾರೆಡ್ಡಿ

- Advertisement -

ಬೆಂಗಳೂರು ನಗರದ ರಸ್ತೆಗಳಲ್ಲಿ ಇರುವ ಗುಂಡಿಗಳು ಕಾಂಗ್ರೆಸ್ ಸರ್ಕಾರದ ಮೇಲೆಯೂ ಟೀಕೆ ತರಿಸುತ್ತಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಗುಂಡಿಗಳನ್ನು ಸರಿಪಡಿಸುವ ಜವಾಬ್ದಾರಿ ಪಾಲಿಕೆ ಹಾಗೂ ರಾಜ್ಯ ಸರ್ಕಾರದ ಮೇಲೆಯಿದೆ ಎಂದು ಸ್ಪಷ್ಟಪಡಿಸಿದರು.

ಪೂರ್ವದ ಬಿಜೆಪಿ ಸರ್ಕಾರದ ಕಾಲದಲ್ಲಿ ರಸ್ತೆ ಗುಂಡಿಗಳ ವಿಚಾರವನ್ನು ಹೈಕೋರ್ಟ್ ಸ್ವತಃ ಮಾನಿಟರ್ ಮಾಡುತ್ತಿತ್ತು. ಎರಡು ವರ್ಷಗಳ ಕಾಲ ಮುಖ್ಯ ಆಯುಕ್ತರನ್ನು ಕರೆಸಿ, ಚೀಫ್ ಜಸ್ಟೀಸ್ ಅವರೇ ನಿರೀಕ್ಷೆ ಇಟ್ಟುಕೊಂಡಿದ್ದರು. ಅದನ್ನೆಲ್ಲಾ ನೋಡಿದ ನಂತರವೂ ನಾವು ಗುಂಡಿಗಳನ್ನು ತಪ್ಪಿಸಿಕೊಳ್ಳಬೇಕಿತ್ತು. ಆಗ ಬಿಜೆಪಿ ವಿರುದ್ಧವೂ ಟೀಕೆಗಳು ಬಂದಿದ್ದವು, ಈಗ ನಾವು ಇದೇ ಸ್ಥಿತಿಯಲ್ಲಿದ್ದೇವೆ ಎಂದು ಅವರು ಹೇಳಿದರು.

ಅಕ್ಟೋಬರ್ ಒಳಗೆ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಬೇಕೆಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅದರಂತೆ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಇದೇ ವೇಳೆ ಆರ್‌ಎಸ್‌ಎಸ್‌ಗೆ 100 ವರ್ಷ ಪೂರೈಕೆ ಬಗ್ಗೆ ಮಾತನಾಡಿ, ಆರ್‌ಎಸ್‌ಎಸ್ ದೊಡ್ಡ ಸಂಘಟನೆ ದೊಡ್ಡ ಮಾತಿಲ್ಲ. ಆದರೆ ಆರ್‌ಎಸ್‌ಎಸ್ ಅವರು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗೇ ಇಲ್ಲ. ಶಾಲಾ ಮಕ್ಕಳು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗಿದ್ದರು. ಇಷ್ಡು ದೊಡ್ಡ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗದೇ ಇರೋದು ದುರಾದೃಷ್ಟ ಎಂದರು.

100 ರೂಪಾಯಿ ನಾಣ್ಯ ಬಿಡುಗಡೆಗೆ ರಾಮಲಿಂಗಾರೆಡ್ಡಿ ವಿರೋಧ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್ ಅವರು ಭಗವತ್ ಧ್ವಜಕ್ಕೆ ಗೌರವ ಕೊಟ್ಟು, ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿರಲಿಲ್ಲ. ಸ್ವಾತಂತ್ರ‍್ಯ ಬಂದು 52 ವರ್ಷಗಳ ಕಾಲ ನಾಗಪುರ ಮತ್ತು ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಅದಾದ ಮೇಲೆ ಜನರ ಒತ್ತಾಯಕ್ಕೆ ಮಣಿದು, ಟೀಕೆ ಟಿಪ್ಪಣಿಗಳು ಬಂದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಈಗ ಸ್ವಾತಂತ್ರ‍್ಯ ದಿನ, ಗಣರಾಜ್ಯ ದಿನ ಆಚರಿಸುತ್ತಾರೆ. ಇದರಿಂದ ಆರ್‌ಎಸ್‌ಎಸ್ ಅವರ ರಾಷ್ಟ್ರಪ್ರೇಮ 52 ವರ್ಷಕ್ಕಿಂತ ಮುಂಚೆ ಹೇಗಿತ್ತು ಅಂತ ಗೊತ್ತಾಗುತ್ತದೆ ಅಂತ ಕಿಡಿಕಾರಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss